×
Ad

ಶಾಲೆಯೊಳಗೆ ಅವಿತು ಕುಳಿತ್ತಿದ್ದ ಇಬ್ಬರು ಉಗ್ರರ ಹತ್ಯೆ

Update: 2017-06-25 15:26 IST

ಶ್ರೀನಗರ, ಜೂ.25: ಶ್ರೀನಗರದ ಪಂತಾ ಚೌಕ ಪ್ರದೇಶದಲ್ಲಿರುವ ದಿಲ್ಲಿ ಪಬ್ಲಿಕ್ ಸ್ಕೂಲ್‌ನ ಕಟ್ಟಡದಲ್ಲಿ ಅವಿತು ಕುಳಿತ್ತಿದ್ದ ಇಬ್ಬರು ಉಗ್ರಗಾಮಿಗಳನ್ನು 15 ಗಂಟೆಗಳ ಕಾರ್ಯಾಚರಣೆಯ ಬಳಿಕ ಭದ್ರತಾ ಸಿಬ್ಬಂದಿಗಳು ಹೊಡೆದುರುಳಿಸಿದ್ದಾರೆ.

ಬೆಳಗ್ಗೆ 3:40ಕ್ಕೆ ಗುಂಡಿನ ಚಕಮಕಿ ಆರಂಭವಾಗಿದ್ದು, ಕಾರ್ಯಾಚರಣೆಯ ವೇಳೆ ಓರ್ವ ಕ್ಯಾಪ್ಟನ್ ಸಹಿತ ಮೂವರು ಸೈನಿಕರಿಗೆ ಗಾಯವಾಗಿದೆ. ಎಲ್ಲರ ಪರಿಸ್ಥಿತಿಯು ಸ್ಥಿರವಾಗಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ಸಂಜೆ ಜಮ್ಮು-ಕಾಶ್ಮೀರದ ನ್ಯಾಶನಲ್ ಹೈವೇ ಸಮೀಪವಿರುವ ಶಾಲೆಯ ಬಳಿ ಕರ್ತವ್ಯ ನಿರತ ಸಿಆರ್‌ಪಿಎಫ್ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ್ದ ಉಗ್ರಗಾಮಿಗಳು ಶ್ರೀನಗರದ ಡಿಪಿಎಸ್ ಆವರಣಕ್ಕೆ ಪ್ರವೇಶಿಸಿದ್ದರು.

ಇಬ್ಬರು ಉಗ್ರರ ಕಳೇಬರ ಒಂದೇ ಕೊಠಡಿಯಲ್ಲಿತ್ತು. ಕಳೆದ ಒಂದು ಗಂಟೆಯಿಂದ ಉಗ್ರರು ಗುಂಡಿನ ದಾಳಿ ನಡೆಸಿಲ್ಲ. ಶಾಲೆಯನ್ನು ಸಂಪೂರ್ಣವಾಗಿ ಶೋಧಿಸಿದ ಬಳಿಕ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News