ಸಸಿಹಿತ್ಲು ಕಡಲ ಕಿನಾರೆಯಲ್ಲಿ ಮೂವರು ನೀರುಪಾಲು
Update: 2017-06-25 16:45 IST
ಮಂಗಳೂರು, ಜೂ.25: ಮಂಗಳೂರು ಸಮೀಪದ ಸಸಿಹಿತ್ಲುವಿನಲ್ಲಿ ಮೀನು ಹಿಡಿಯಲು ತೆರಳಿದ್ದ ಮೂವರು ನೀರು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.
ಸಸಿಹಿತ್ಲು ಅಳಿವೆ ಬಾಗಿಲಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಚಿತ್ರಾಪುವಿನಿಂದ ಸಸಿಹಿತ್ಲು ಕಡೆಗೆ ದೋಣಿಯಲ್ಲಿ ಬರುವಾಗ ಅಳಿವೆ ಬಾಗಿಲಿನಲ್ಲಿ ಅವಘಡ.
ನದಿ ಕಡಲು ಸೇರುವ ಜಾಗದಲ್ಲಿ ಈ ಘಟನೆ ನಡೆದಿದೆ. ಸ್ಥಳದಲ್ಲಿ ಭಾರಿ ಜನಸ್ತೋಮ ಉಂಟಾಗಿದೆ ಎಂದು ತಿಳಿದು ಬಂದಿದೆ.