ಆದಿತ್ಯನಾಥ್ ಆಡಳಿತದಲ್ಲಿ ಅಪರಾಧಗಳ ರಾಜ್ಯವಾಗುತ್ತಿದೆ ಉತ್ತರ ಪ್ರದೇಶ

Update: 2017-06-26 06:56 GMT

ಲಕ್ನೋ, ಜೂ. 26: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಬಳಿಕ ಯೋಗಿ ಆದಿತ್ಯನಾಥ್ ಸರಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ ನೂರು ದಿನಗಳಾಗಿವೆ.

ಈ ನೂರು ದಿನಗಳಲ್ಲಿ ಹಲವಾರು ಗಂಭೀರ ಹಾಗೂ ಬೆಚ್ಚಿ ಬೀಳಿಸುವ ಅಪರಾಧ ಪ್ರಕರಣಗಳು ರಾಜ್ಯದಿಂದ ವರದಿಯಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸುಧಾರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸರಕಾರ ಆಶ್ವಾಸನೆ ನೀಡಿದ್ದರೂ ಅಪರಾಧ ಸಂಖ್ಯೆ ಹೆಚ್ಚಾಗಿವೆ ಎಂಬುದನ್ನು ಸರಕಾರವೇ ಒಪ್ಪಿಕೊಂಡಿದೆ.

ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರದ ಪ್ರಮುಖ ಅಪರಾಧ ಪ್ರಕರಣಗಳು ಇಂತಿವೆ.

ಮೇ 2 : ರಾಜಪುತ ಮಹಿಳೆಯೊಬ್ಬಳು ಮುಸ್ಲಿಂ ವ್ಯಕ್ತಿಯೊಬ್ಬನೊಂದಿಗೆ ಪರಾರಿಯಾದ ನಂತರ ಹಿಂದೂ ಯುವ ವಾಹಿನಿ ಕಾರ್ಯಕರ್ತರೆನ್ನಲಾದ ಕೆಲವರು ಬುಲಂದ್ ಶಹರ್ ಎಂಬಲ್ಲಿನ ಸೋಹಿ ಎಂಬಲ್ಲಿ ಮೊಹಮ್ಮದ್ ಗುಲಾಮ್ ಎಂಬ ಮಧ್ಯ ವಯಸ್ಕ ಮುಸ್ಲಿಂ ವ್ಯಕ್ತಿಯನ್ನು ಕೊಲೆಗೈದಿದ್ದರು.

ಮೇ 9 : ನಿವೃತ್ತ ರಕ್ಷಣಾ ಇಲಾಖೆಯ ಸಿಬ್ಬಂದಿಯೊಬರ ಇಬ್ಬರು ಪುತ್ರಿಯರನ್ನು ಕತ್ತು ಸೀಳಿ ಪರ ಪಟ್ಟಣದ ರಾಮ ವಿಹಾರ್ ಕಾಲನಿಯಲ್ಲಿನ ಅವರ ನಿವಾಸದಲ್ಲಿ ಹತ್ಯೆ ಮಾಡಲಾಗಿತ್ತು.

ಮೇ 15 : ಮಥುರಾದ ಹೋಲಿ ಗೇಟ್ ಮಾರುಕಟ್ಟೆಯಲ್ಲಿ ಇಬ್ಬರು ಚಿನ್ನದ ವ್ಯಾಪಾರಿಗಳಾದ ಮೇಘ್ ಮತ್ತು ವಿಕಾಸ್ ಎಂಬವರನ್ನು ಗುಂಡಿಕ್ಕಿ ಸಾಯಿಸಲಾಗಿದ್ದರೆ ಇನ್ನಿಬ್ಬರಿಗೆ ಗಂಭೀರ ಗುಂಡೇಟು ತಗಲಿತ್ತು. ಕೋಟಿಗಟ್ಟಲೆ ಮೌಲ್ಯದ ಚಿನ್ನಾಭರಣಗಳೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದರು.

ಮೇ 17 : ಲಕ್ನೋದ ಮೀರಾ ಬಾಯಿ ಮಾರ್ಗ್ ಎಂಬಲ್ಲಿ 2007ನೆ ಕರ್ನಾಟಕ ಬ್ಯಾಚಿನ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರು ರಸ್ತೆ ಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.

ಮೇ 21 : ಮೀರತ್ ನಗರದಲ್ಲಿ ಯುವ ಜೋಡಿಯೊಂದನ್ನು ಮನೆಯಿಂದ ಹೊರಗೆಳೆದ ಹಿಂದೂ ಯುವವಾಹಿನಿ ಕಾರ್ಯಕರ್ತರೆನ್ನಲಾದ ಕೆಲವರು ಅಲ್ಲಿದ್ದ ಯುವಕನೊಬ್ಬನಿಗೆ ಥಳಿಸಿದ್ದರು.

ಮೇ 22 : ನಸೀರಪುರ ಗ್ರಾಮದಲ್ಲಿ ಮುಸ್ಲಿಂ ಧಾರ್ಮಿಕ ಗುರುವೊಬ್ಬರನ್ನು ಮಸೀದಿಯೊಂದರಲ್ಲಿ ಗುಂಡಿಕ್ಕಿ ಸಾಯಿಸಲಾಗಿತ್ತು.

ಜೂನ್ 1 : ಬರೇಲಿಯ ಬಿಜೆಪಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ರಾಯೀಸ್ ಅಹಮದ್ ಅವರನ್ನು ಹಾಡುಹಗಲೇ ಗುಂಡಿಕ್ಕಿ ಸಾಯಿಸಲಾಗಿತ್ತು.

ಜೂನ್ 23 : ಅತ್ಯಾಚಾರ ಯತ್ನವನ್ನು ವಿರೋಧಿಸಿದ್ದಕ್ಕಾಗಿ 19 ವರ್ಷದ ಯುವತಿಯೊಬ್ಬಳನ್ನು ಮಡಿಯೋನ್ ಎಂಬಲ್ಲಿ ಟ್ಯಾಕ್ಸಿಯೊಂದರಿಂದ ಹೊರಕ್ಕೆಸೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News