ಉಳ್ಳಾಲದಲ್ಲಿ ಮತ್ತೆ ಕಡಲ್ಕೊರೆತ
Update: 2017-06-26 15:30 IST
ಮಂಗಳೂರು, ಜೂ. 26: ಉಳ್ಳಾಲದಲ್ಲಿ ಮತ್ತೆ ಕಡಲ್ಕೊರೆತ ಉಂಟಾಗಿ ಅಪಾರ ಹಾನಿ ಸಂಭವಿಸಿದ ಘಟನೆ ಇಂದು ನಡೆದಿದೆ.
ಇಲ್ಲಿನ ಕೈಕೊ, ಕಿಲ್ರಿಯಾ ನಗರ ಮತ್ತು ಮಸೀದಿಯ ಸಮೀಪದ ಸುಮಾರು 50ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಕಡಲ್ಕೊರೆತದಿಂದ ಸ್ಥಳೀಯರ ಜನಜೀವನ ಅಸ್ಥವ್ಯಸ್ಥವಾಗಿದೆ. ನಿನ್ನೆಯಿಂದ ಸುರಿಯುತ್ತಿರುವ ನಿರಂತರ ಮಳೆಗೆ ಕಡಲ್ಕೊರೆತ ಹೆಚ್ಚಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಇತ್ತೀಚೆಗೆ ಹಾಕಿದ ಕಲ್ಲಿನ ತಡೆಗೋಡೆಯೂ ಸಮುದ್ರ ಪಾಲಾಗಿದ್ದು, ಸ್ಥಳೀಯರು ತಮ್ಮ ಮನೆಯ ಸಾಮಗ್ರಿಗಳನ್ನು ಬೇರೆಡೆಗೆ ಸಾಗಿಸುತ್ತಿದ್ದು, ಘಟನೆಯಿಂದ ಭಯಭೀತರಾಗಿದ್ದಾರೆ.