ಮೆಟ್ರೋದಲ್ಲಿ ಪೊಲೀಸರ ಟಿಕೆಟ್ ರಹಿತ ಪ್ರಯಾಣ; ದೂರು

Update: 2017-06-26 11:59 GMT

ಕೊಚ್ಚಿ, ಜೂ. 26: ಕೇರಳದಲ್ಲಿ ಮೆಟ್ರೊ ಆರಂಭವಾದ ಬಳಿಕ ಪೊಲೀಸರ ವಿರುದ್ಧ ಮೆಟ್ರೋದ ಐಜಿಗೆ ದೂರು ನೀಡಲಾಗಿದೆ. ಕೇರಳ ಪೊಲೀಸ್‌ನ ಭಾಗವಾದ ಸ್ಟೇಟ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಪೋರ್ಸ್‌ನ ಕೊಚ್ಚಿ ಮೆಟ್ರೊ ಭದ್ರತೆ ಹೊಣೆಯಿರುವ ಅಧಿಕಾರಿಗಳ ವಿರುದ್ಧ ದೂರು ನೀಡಲಾಗಿದೆ. ಮೆಟ್ರೊ ಭದ್ರತೆ ಇರುವ ಅಧಿಕಾರಿಗಳು ತಮ್ಮ ಗೆಳೆಯರು ಮತ್ತು ಕುಟುಂಬದವರನ್ನು ಟಿಕೆಟ್ ಇಲ್ಲದೆ ಪ್ರಯಾಣಿಸುವಂತೆ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆದರೆ ಐಜಿಯವರ ಸೂಚನೆಯಂತೆ ದೂರನ್ನು ಪರಿಶೀಲಿಸಿದ ಆಯುಕ್ತ ಪಿ. ವಿಜಯನ್ ಕೊಚ್ಚಿ ಮೆಟ್ರೊದ ವಿವಿಧ ಸ್ಟೇಶನ್‌ಗಳಲ್ಲಿ ಸುರಕ್ಷಾ ಹೊಣೆಯಿರುವ ಪೊಲೀಸರು ಹೀಗೆ ಪ್ರಯಾಣಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಕಾನೂನು ಬಾಹಿರವಲ್ಲ. ಬೇರೆ ಪ್ರಯಾಣ ಸೌಕರ್ಯವಿಲ್ಲದ ಕಾರಣ ಹೀಗೆ ಆಗುತ್ತಿದೆ. ಅತಿಶೀಘ್ರವಾಗಿ ಅವರಿಗೆ ಪಾಸ್ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News