×
Ad

ಗುಂಡ್ಯ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿತ

Update: 2017-06-26 19:04 IST

ಉಪ್ಪಿನಂಗಡಿ, ಜೂ. 26: ದ.ಕ. ಜಿಲ್ಲಾ ಗಡಿ ಪ್ರದೇಶವಾದ ಶಿರಾಡಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಇಲ್ಲಿನ ಗುಂಡ್ಯ- ಅಡ್ಡಹೊಳೆಯ ಮಧ್ಯಭಾಗದಲ್ಲಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಒಂದು ಬದಿ ಕುಸಿದಿದೆ.

ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಹಾಕಿರುವ ಮೋರಿಯ ಒಂದು ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕುಸಿದಿದ್ದು, ಈ ಭಾಗದಲ್ಲಿ ಘನ ವಾಹನಗಳು ಸಂಚರಿಸಿದರೆ, ಹೆದ್ದಾರಿ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆಯಲ್ಲದೆ, ಮೋರಿಗೂ ಹಾನಿಯಾಗುವ ಸಂಭವವಿದೆ.

ಸುದ್ದಿ ತಿಳಿದು ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಕುಸಿದ ಭಾಗದಲ್ಲಿ ಮರಳು ಚೀಲಗಳನ್ನಿಟ್ಟು ವಾಹನಗಳು ಈ ಭಾಗದಲ್ಲಿ ಬರದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಇದರಿಂದ ಇಲ್ಲೀಗ ಹೆದ್ದಾರಿಯ ಒಂದು ಭಾಗದಲ್ಲಿ ಮಾತ್ರ ವಾಹನ ಸಂಚಾರ ಸಾಧ್ಯವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News