×
Ad

ಪುತ್ತೂರಿನಾದ್ಯಂತ ಸಂಭ್ರಮದ ಈದುಲ್ ಫಿತ್ರ್

Update: 2017-06-26 19:49 IST

ಪುತ್ತೂರು, ಜೂ. 26: ತಾಲೂಕಿನಾದ್ಯಂತ ರವಿವಾರ ಭಕ್ತಿ, ಸಂಭ್ರಮದಿಂದ ಈದುಲ್ ಫಿತ್ರ್ ಆಚರಿಸಿದರು.

ಪುತ್ತೂರು ಕೇಂದ್ರ ಜುಮಾ ಮಸೀದಿಯಲ್ಲಿ ಮುದರ್ರಿಸ್ ಸಯ್ಯದ್ ಅಹಮ್ಮದ್ ಪೂಕೋಯ ತಂಙಳ್ ಈದ್ ನಮಾಝ್ ಮತ್ತು ಖುತ್‌ಬಾ ನಿರ್ವಹಿಸಿ ಈದ್ ಸಂದೇಶ ನೀಡಿದರು. ಪುತ್ತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಖತೀಬ್ ಎಸ್.ಬಿ.ಮುಹಮ್ಮದ್ ದಾರಿಮಿ ಈದ್ ನಮಾಝ್, ಖುತ್‌ಬಾ ನಿರ್ವಹಿಸಿ ಈದ್ ಸಂದೇಶ ನೀಡಿದರು. ಬಳಿಕ ಇಲ್ಲಿನ ಕರವಡ್ತ ವಲಿಯುಲ್ಲಾಹಿ ದರ್ಗಾ ಶರೀಫ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಬಪ್ಪಳಿಗೆ ಮಸೀದಿಯಲ್ಲಿ ಖತೀಬ್ ಮಹಮ್ಮದ್ ರಫೀಕ್ ಫೈಝಿ ಈದ್ ನಮಾಝ್, ಖುತ್‌ಬಾ ನಿರ್ವಹಿಸಿದರು. ಸಾಲ್ಮರ ಸೈಯದ್‌ಮಲೆ ಮಸೀದಿಯಲ್ಲಿ ಖತೀಬ್ ಉಮ್ಮರ್ ದಾರಿಮಿ ಸಾಲ್ಮರ ಈದ್ ನಮಾಝ್, ಖುತ್‌ಬಾ ನಿರ್ವಹಿಸಿ ಈದ್ ಸಂದೇಶ ನೀಡಿದರು.

ಪಡೀಲ್ ಮಸೀದಿಯಲ್ಲಿ ಖತೀಬ್ ಹನೀಫ್ ದಾರಿಮಿ ನೇತೃತ್ವವಹಿಸಿದ್ದರು. ಕೂರ್ನಡ್ಕ ಫೀರ್ ಮೊಹಲ್ಲಾ ಮಸೀದಿಯಲ್ಲಿ ಖತೀಬ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಬೀಟಿಗೆ ಜುಮಾ ಮಸೀದಿಯಲ್ಲಿ ಖತೀಬ್ ಅಬ್ದುಲ್ ರಝಾಕ್ ದಾರಿಮಿ ರೆಂಜಲಾಡಿ, ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ಖತೀಬ್ ಅಬೂಬಕ್ಕರ್ ಸಅದಿ ಈದ್ ನಮಾಝ್, ಖುತ್‌ಬಾ ನಿರ್ವಹಿಸಿದರು. ಮಸೀದಿ ಕಮಿಟಿ ಅಧ್ಯಕ್ಷ ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ ಈದ್ ಸಂದೇಶ ನೀಡಿದರು.

ವೀರಮಂಗಲ ಬದ್ರಿಯಾ ಜುಮಾ ಮಸೀದಿಯಲ್ಲಿ ಖತೀಬ್ ಕೆ.ಎಂ. ಹನೀಫ್ ದಾರಿಮಿ,  ಪರಣೆ ಮಿಹ್‌ರಾಜ್ ಜುಮಾ ಮಸೀದಿಯಲ್ಲಿ ಖತೀಬ್ ತಾಜುದ್ದೀನ್ ಫೈಝಿ, ಸರ್ವೆ ಕೂಡುರಸ್ತೆ ರಿಫಾಯಿಯಾ ಜುಮಾ ಮಸೀದಿಯಲ್ಲಿ ಖತೀಬ್ ಯಾಕೂಬ್ ದಾರಿಮಿ, ಸಾರ್ಯ ಅಲ್‌ಅಮಲ್ ಜುಮಾ ಮಸೀದಿಯಲ್ಲಿ ಖತೀಬ್ ಸಿದ್ದೀಖ್ ಸಖಾಫಿ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು.

ಪುತ್ತೂರು ಕೇಂದ್ರ ಜುಮಾ ಮಸೀದಿಯಲ್ಲಿ ಈದ್ ನಮಾಝ್ ನಿರ್ವಹಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News