ರಾಷ್ಟ್ರಪತಿ ಚುನಾವಣೆ: ನಾಮಪತ್ರ ಸಲ್ಲಿಸಿದ ಮುಂಬೈಯ ದಂಪತಿ

Update: 2017-06-26 15:29 GMT

ಮುಂಬೈ, ಜೂ.26: ಮುಂಬೈಯ ಉಪನಗರ ಅಂಧೇರಿಯ ನಿವಾಸಿಗಳಾದ ಮುಹಮ್ಮದ್ ಅಬ್ದುಲ್ ಹಮೀದ್ ಪಟೇಲ್ ಮತ್ತು ಅವರ ಪತ್ನಿ ಸಾಯಿರಾ ಬಾನೊ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದು, ಈ ಪ್ರತಿಷ್ಠಿತ ಹುದ್ದೆಗೆ ನಾಮಪತ್ರ ಸಲ್ಲಿಸಿದ ದೇಶದ ಪ್ರಪ್ರಥಮ ದಂಪತಿ ಎನಿಸಿಕೊಂಡಿದ್ದಾರೆ.

   ಆದರೆ ಈ ದಂಪತಿ ಗೆಲ್ಲುವ ಮಾತು ಹಾಗಿರಲಿ, ಇವರು ಅಂತಿಮವಾಗಿ ಕಣದಲ್ಲಿ ಉಳಿದುಕೊಳ್ಳುವ ಸಾಧ್ಯತೆಯೂ ಕಾಣುತ್ತಿಲ್ಲ. ಯಾಕೆಂದರೆ ನಿಯಮದ ಪ್ರಕಾರ ನಾಮಪತ್ರ ಸಲ್ಲಿಸುವ ಅಭ್ಯರ್ಥಿಯ ಹೆಸರನ್ನು 50 ಶಾಸಕರು ಪ್ರಸ್ತಾಪಿಸಬೇಕು ಮತ್ತು 50 ಶಾಸಕರು ಅನುಮೋದಿಸಬೇಕು. ಆದರೆ ಈ ಇಬ್ಬರ ನಾಮಪತ್ರವೂ ಈ ನಿಯಮ ದ ಪ್ರಕಾರ ಇರುವ ಸಾಧ್ಯತೆ ಕಡಿಮೆ.

   ತನ್ನ ನಾಮಪತ್ರ ತಿರಸ್ಕೃತಗೊಳ್ಳುತ್ತದೆ ಎಂಬುದು ಮುಹಮ್ಮದ್ ಅವರಿಗೂ ತಿಳಿದಿದೆ. ಒಮ್ಮೆ ಚುನಾವಣೆ ನಡೆಯಲಿ. ಆ ಬಳಿಕ ಈ ಷರತ್ತನ್ನು (ನಾಮಪತ್ರಕ್ಕೆ 100 ಶಾಸಕರ ಬೆಂಬಲ) ರದ್ದುಪಡಿಸಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇನೆ ಎಂದವರು ಹೇಳಿದ್ದಾರೆ.

ಜೂನ್ 30ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ಜುಲೈ 17ರಂದು ಚುನಾವಣೆ ನಡೆಯುತ್ತದೆ. ಜುಲೈ 20ರಂದು ಫಲಿತಾಂಶ ಹೊರಬೀಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News