ಕಾಟಿಪಳ್ಳದಲ್ಲಿ ಸಂಭ್ರಮದ ಈದುಲ್ ಫಿತ್ರ್
ಸುರತ್ಕಲ್, ಜೂ.26: ಕಾಟಿಪಳ್ಳ 2 ಬ್ಲಾಕ್‌ನ ಪಣಂಬೂರು ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಸೋಮವಾರ ಸಂಭ್ರಮದಲ್ಲಿ ಈದುಲ್ ಫಿತ್ರ್ ಆಚರಿಸಲಾಯಿತು.
ಮಸೀದಿಯ ಖತೀಬ್ ಅಬ್ದುಲ್ ನಾಸರ್ ಮದನಿ ಖುತುಬಾ ಹಾಗೂ ಈದ್‌ನ ವಿಶೇಷ ನಮಾಝ್ ನಿರ್ವಹಿಸಿದರು. ಕಾಟಿಪಳ್ಳ ಸಮೀಪದ ಕೃಷ್ಣಾಪುರ, ಚೊಕ್ಕಬೆಟ್ಟು, ಸೂರಿಂಜೆ, ಸುರತ್ಕಲ್ ಪ್ರದೆಶಗಳಲ್ಲಿ ರವಿವಾರ ಈದುಲ್ ಫಿತ್ರ್ ಆಚರಿಸಲಾಗಿತ್ತು. ಆದರೆ, ಇಲ್ಲಿ ಸೋಮವಾರ ಈದ್ ಆಚರಿಸುವ ಬಗ್ಗೆ ಜಮಾಅತಿಗರು ಆಕ್ಷೇವ ವ್ಯಕ್ತ ಪಡಿಸಿದ್ದಲ್ಲದೆ, ಕೈಕ್ಯ ಮಿಲಾಯಿಸುವ ಹಂತದ ವರೆಗೂ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ರವಿವಾರ ರಾತ್ರಿಯಿಂದಲೇ ಸುರತ್ಕಲ್ ಪೊಲೀಸರು ಭದ್ರತೆ ಕೈಗೊಂಡಿದ್ದರು.
ಇಲ್ಲಿನ ಖಾಝಿಯಾಗಿರುವ ಫಝಲ್ ಕೋಯಮ್ಮ ತಂಞಳ್ ಕೂರಾ ಇವರ ಆದೇಶದಂತೆ ಕಾಟಿಪಳ್ಳ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಸೋಮವಾರವೇ ಈದುಲ್ ಫಿತ್ರ್ ಆಚರಿಸಲಾಯಿತು. ಈ ವೇಳೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.
ಮಸೀದಿಯ ಅಧ್ಯಕ್ಷ ಮುಹಮ್ಮದ್ ತಮೀಮ್, ಕಾರ್ಯದರ್ಶಿ ಅಬೂಬಕರ್ (ಅಬ್ಬು), ಮಾಜೀ ಅಧ್ಯಕ್ಷ ಸಲೀಂ ರಫಿ, ಮಾಜೀ ಕಾರ್ಯದರ್ಶಿ ಯೂಸುಫ್ ಮುಂತಾದವರು ಈದ್ ನಮಾಝ್‌ನಲ್ಲಿ ಉಪಸ್ಥಿತರಿದ್ದರು.