×
Ad

​​ಅಡಕೆ ಕಳವು: ಮೂವರ ಸೆರೆ

Update: 2017-06-26 22:27 IST

ಮಂಗಳೂರು, ಜೂ. 26: ಬಜ್ಪೆ ಸಮೀಪದ ವ್ಯಕ್ತಿಯೊಬ್ಬರಿಗೆ ಸೇರಿದ ಅಡಕೆಯನ್ನು ಕಳವುಗೈದ ಮೂವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಎಡಪದವಿನ ಅಮರನಾಥ್ ಯಾನೆ ಧನು, ದಿನೇಶ್ ದೇವಾಡಿಗ, ಕಬೀರ್ ಯಾನೆ ಇಬ್ರಾಹೀಂ ಬಂಧಿತ ಆರೋಪಿಗಳು.

ಇವರು ತಿಂಗಳ ಹಿಂದೆ 2 ಕ್ವಿಂಟಾಲ್ ಅಡಕೆಯನ್ನು ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿ ಅವರಿಂದ ಅಡಕೆ ಹಾಗು ಸಾಗಾಟಕ್ಕೆ ಬಳಸಿದ ರಿಕ್ಷಾ ವಶಪಡಿಸಲಾಗಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಸೆರೆ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News