ಹತ್ಯೆಗೀಡಾದ ಕಲಾಯಿಯ ಅಶ್ರಫ್ ಮನೆಗೆ ಮೊಯ್ದಿನ್ ಬಾವ ಭೇಟಿ
Update: 2017-06-27 15:50 IST
ಮಂಗಳೂರು, ಜೂ.27: ದುಷ್ಕರ್ಮಿಗಳಿಂದ ಕೊಲೆಗೀಡಾದ ಅಶ್ರಫ್ ಕಲಾಯಿಯ ಮನೆಗೆ ಶಾಸಕ ಮೊಯ್ದಿನ್ ಬಾವ ಭೇಟಿ ನೀಡಿ ಕುಟಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಕೊಲೆಗಡುಕರನ್ನು ಮತ್ತು ಅವರಿಗೆ ಸಹಕಾರ ನೀಡಿದವರನ್ನು ಎಷ್ಟೇ ಪ್ರಭಾವಿಗಳಾದರೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಮೊಯ್ದಿನ್ ಬಾವ, ಶೀಘ್ರ ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಘಟನೆ ಬಗ್ಗೆ ಚರ್ಚೆ ನಡೆಸಿ ತಪ್ಪಿತಸ್ತರನ್ನು ಮತ್ತು ಘಟನೆ ಹಿಂದಿರುವ ಶಕ್ತಿಗಳನ್ನು ಮಟ್ಟ ಹಾಕಲು ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದರು.
ಅಶ್ರಫ್ ಕಲಾಯಿ ಸಮಾಜ ಸೇವೆಯನ್ನು ಮುಖ್ಯಮಂತ್ರಿಗಳ ಗಮನ ಸೆಳೆದು ಪರಿಹಾರ ದೊರಕಿಸಿ ಕೊಡಲಾಗುವುದು ಎಂದರು.
ಹಾಸಿಗೆ ಹಿಡಿದು ಕಣ್ಣೀರು ಸುರಿಸುತ್ತಿದ್ದ ಮೃತ ಅಶ್ರಫ್‌ರ ತಾಯಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಶಾಸಕರೊಂದಿಗೆ ಅಬ್ದುಲ್ ಜಲೀಲ್ ಕೃಷ್ಣಾಪುರ, ಹಾರಿಸ್ ಬೈಕಂಪಾಡಿ ಮತ್ತಿತರರು ಉಪಸ್ತಿತರಿದ್ದರು.