ಕಾಸರಗೋಡು; ಮುಖ್ಯಮಂತ್ರಿಯಿಂದ ಕರಾವಳಿ ಪೊಲೀಸ್ ಠಾಣೆ ಉದ್ಘಾಟಣೆ
Update: 2017-06-27 16:29 IST
ಕಾಸರಗೋಡು, ಜೂ.27: ಕುಂಬಳೆ ಮತ್ತು ನೀಲೇಶ್ವರ ಆಯಿತ್ತಲದಲ್ಲಿ ಕರಾವಳಿ ಪೊಲೀಸ್ ಠಾಣೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಉದ್ಘಾಟಿಸಿದರು.
ಕುಂಬಳೆ ಶಿರಿಯಾದಲ್ಲಿ ನಿರ್ಮಿಸಿರುವ ಕರಾವಳಿ ಪೊಲೀಸ್ ಠಾಣಾ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ .ಜಿ ಸಿಮೋನ್, ಮಂಜೇಶ್ವರ ಶಾಸಕ ಪಿ. ಬಿ ಅಬ್ದುಲ್ ರಝಾಕ್ , ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ. ಕೆ .ಎಂ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು.
ಮಂಜೇಶ್ವರದಿಂದ ಮೊಗ್ರಾಲ್ ಪುತ್ತೂರು ತನಕ ಈ ಠಾಣೆ ಯ ವ್ಯಾಪ್ತಿ ಹೊಂದಿದೆ.
ಅಯಿತ್ತಲದಲ್ಲಿ ನಿರ್ಮಿಸಿರುವ ಕರಾವಳಿ ಪೊಲೀಸ್ ಠಾಣೆಯನ್ನು ರಾಜ್ಯಸಚಿವ ಕಡನ್ನಪಳ್ಳಿ ರಾಮಚಂದ್ರನ್ ಉದ್ಘಾಟಿಸಿದರು. ಶಾಸಕ ಎಂ . ರಾಜಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.