ಅತ್ತಾವರದಲ್ಲಿ ‘ಝಾಂಗೋಸ್ ಗ್ರಿಲ್ಸ್’ ಆರಂಭ
ಮಂಗಳೂರು, ಜೂ. 27: ಅತ್ತಾವರದ ನೀಲಗಿರೀಸ್ ಸೂಪರ್ ಮಾರ್ಕೆಟ್ ಎದುರು ‘ಝಾಂಗೋಸ್ ಗ್ರಿಲ್ಸ್’ ಚಿಕನ್ ಖಾದ್ಯಗಳ ನೂತನ ಔಟ್‌ಲೆಟ್ ಆರಂಭಗೊಂಡಿದೆ. ಬಾಯಲ್ಲಿ ನೀರೂರಿಸುವ ವೈವಿಧ್ಯಮಯ ಗ್ರಿಲ್ಡ್ ಚಿಕನ್ ಖಾದ್ಯಗಳು ಈ ಔಟ್‌ಲೆಟ್‌ನಲ್ಲಿ ಲಭ್ಯವಿದ್ದು, ಗ್ರಾಹಕರು ಅಲ್ಲೇ ಖಾದ್ಯಗಳ ರುಚಿಯನ್ನು ಸವಿಯಬಹುದಾಗಿದೆ.
ಆರೋಗ್ಯ ಹಾಗೂ ಸ್ವಾದಿಷ್ಟಭರಿತ...!
‘‘ನಮ್ಮ ನೂತನ ಔಟ್‌ಲೆಟ್‌ನಲ್ಲಿ ಅಜಿನೊಮೊಟೊ ಬಳಸದೆ ನಾನಾ ಬಗೆಯ ನಾನಾ ರುಚಿಯ ಚಿಕನ್‌ನ ಗ್ರಿಲ್ಡ್ ಖಾದ್ಯಗಳು ಲಭ್ಯವಿವೆ. ಜಿಂಜರ್ ಫ್ಯೂಶನ್, ಪೆರಿಪೆರಿ, ಬಾರ್ಬಿಕ್ಯೂ ಚಿಲ್ಲಿ, ಕ್ಲಾಸಿಕ್ ಟಿಕ್ಕಾ, ಸುಲ್ತಾನಿ, ಪೆಪ್ಪರಿ ಹಾಗೂ ಇನ್ನು ಇತರ ಹಲವಾರು ಫ್ಲೇವರ್‌ಗಳಲ್ಲಿ ಚಿಕನ್ ಐಟಂಗಳು ಇಲ್ಲಿ ಬಿಸಿ ಬಿಸಿಯಾಗಿ ತಯಾರಿಸಿ ನೀಡಲಾಗುತ್ತದೆ. ಹೊಸ ಹೊಸ ವಿಭಿನ್ನ ಖಾದ್ಯಗಳನ್ನು ಮುಂದೆ ಸೇರ್ಪಡೆ ಮಾಡಲಾಗುವುದು. ಇಂದಿನಿಂದ ಔಟ್‌ಲೆಟ್ ಅಧಿಕೃತವಾಗಿ ಅತ್ತಾವರದಲ್ಲಿ ಕಾರ್ಯಾರಂಭಿಸುತ್ತಿದೆ’’ ಎಂದು ದುಬೈನ ರೆಸ್ಟೋರೆಂಟ್‌ನಲ್ಲಿ ಸಮುದ್ರ ಮೀನುಗಳ ನವನವೀನ ಖಾದ್ಯಗಳ ಆವಿಷ್ಕಾರದ ಮೂಲಕ ಗ್ರಾಹಕರ ಮನ ಗೆದ್ದಿರುವ ಮಂಗಳೂರು ಮೂಲದ ಬಾಣಸಿಗ ಝಹೀರ್ ತಿಳಿಸಿದ್ದಾರೆ.
ಅತ್ತಾವರದಲ್ಲಿ ‘ಝಾಂಗೋಸ್ ಕ್ಲೌಡ್ ಕಿಚನ್’ ಹೆಸರಿನ ಅಡುಗೆ ಮನೆಯ ಮೂಲಕ ಈಗಾಗಲೇ ಗ್ರಾಹಕರಿಗೆ ಆರ್ಡರ್ ಮೇಲೆ ಪೂರೈಕೆ ಮಾಡಲಾಗುತ್ತಿದ್ದು, ಇದೀಗ ಔಟ್‌ಲೆಟ್ ಆರಂಭಿಸುವ ಮೂಲಕ ಸ್ಥಳದಲ್ಲಿಯೇ ಚಿಕನ್ ಗ್ರಿಲ್ ಖಾದ್ಯಗಳ ಸವಿಯನ್ನು ಸವಿಯಲು ಅವರು ಅವಕಾಶ ಮಾಡಿಕೊಟ್ಟಿದ್ದಾರೆ. ಮುಂದೆ ಕದ್ರಿಯಲ್ಲಿ ಹೊಸ ಔಟ್‌ಲೆಟ್ ತೆರೆಯುವ ಇರಾದೆಯನ್ನು ಇವರು ಹೊಂದಿದ್ದಾರೆ. ಕ್ಲೌಡ್ ಕಿಚನ್ ಮೂಲಕ ಈಗಾಗಲೇ ಗ್ರಾಹಕರಿಗೆ ಘೀ ರೋಸ್ಟ್, ಶಾಹಿ ರೋಸ್ಟ್, ಪೆಪ್ಪರ್ ರೋಸ್ಟ್, ಮಲಬಾರ್ ರೋಸ್ಟ್, ಲೆಮನ್‌ಗ್ರಾಸ್ ರೋಸ್ಟ್, ಸೌತ್ ರೋಸ್ಟ್, ಪೆರಿ ಪೆರಿ, ಜಿಂಜರ್ ಫ್ಯೂಶನ್ ಟಿಕ್ಕಾ, ಕ್ಲಾಸಿಕ್ ಟಿಕ್ಕಾ ಮೊದಲಾದ ಕೋಳಿ ಮಾಂಸದ ಖಾದ್ಯಗಳ ಜತೆಗೆ, ಸಿಗಡಿ- ಏಡಿ- ಬೊಂಡಾಸ್ ಮೊದಲಾದವುಗಳ ಚಿಲ್ಲಿ ರೋಸ್ಟ್, ಏಡಿಯ ಪೆಪ್ಪರ್ ಲೀಸಿಯಸ್ ಅಲ್ಲದೆ, ಟಿಕ್ಕಾ ಮಸಾಲಾ, ಚೆಟ್ಟಿನಾಡು ಮೊದಲಾದ ಕೋಳಿ ಕರ್ರಿ ಖಾದ್ಯಗಳನ್ನು ಪೂರೈಕೆ ಮಾಡುತ್ತಿದ್ದಾರೆ.