ಜು.8ರಂದು ರಾಷ್ಟ್ರೀಯ ಜನತಾ ನ್ಯಾಯಾಲಯ
ಮಂಗಳೂರು, ಜೂ.27: ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ನ್ಯಾಯಾಲಯಗಳಲ್ಲಿ ಮತ್ತು ಮೂಡಬಿದ್ರೆ ನ್ಯಾಯಾಲಯದಲ್ಲಿ ಜು.8ರಂದು ರಾಷ್ಟ್ರೀಯ ಜನತಾ ನ್ಯಾಯಾಲಯವನ್ನು ಹಮ್ಮಿಕೊಳ್ಳಲಾಗಿದೆ.
ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥ ಪಡಿಸಲಾಗುವುದು. ಬ್ಯಾಂಕಿನ ವಿಷಯಗಳು, ಕಲಂ-138 ಎನ್.ಐ. ಕಾಯ್ದೆ, ಹಣ ವಸೂಲಾತಿ ದಾವೆಗಳು (ಚಾಲ್ತಿಯಲ್ಲಿರುವ ವ್ಯಾಜ್ಯಗಳು ಮತ್ತು ವ್ಯಾಜ್ಯ ಪೂರ್ವ ವಿಷಯಗಳು), ಕಂದಾಯ, ನರೇಗಾ, ಭೂ ಸ್ವಾಧೀನ ಪ್ರಕರಣಗಳು, ಕಾರ್ಮಿಕ ಮತ್ತು ಕೌಟುಂಬಿಕ ವಿಷಯಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು ಮತ್ತು ವಿಮಾ ಕ್ಲೆಮುಗಳು, ವಿದ್ಯುಚ್ಛಕ್ತಿ/ ನೀರು/ ದೂರವಾಣಿ/ ಸಾರ್ವಜನಿಕ ಉಪಯುಕ್ತ ಸೇವೆಗಳ ವ್ಯಾಜ್ಯಗಳು, ಗ್ರಾಹಕರ ವ್ಯಾಜ್ಯಗಳು/ ತೆರಿಗೆ ವಿಷಯಗಳು, ಬ್ಯಾಂಕಿನ ವಿಷಯಗಳು ಕಲಂ-138 ಎನ್.ಐ. ಕಾಯ್ದೆ, ಹಣ ವಸೂಲಾತಿ ದಾವೆಗಳು (ಚಾಲ್ತಿಯಲ್ಲಿರುವ ವ್ಯಾಜ್ಯಗಳು ಮತ್ತು ವ್ಯಾಜ್ಯ ಪೂರ್ವ ವಿಷಯಗಳು), ರಾಜೀಯಾಗಬಹುದಾದಂತಹ ಕ್ರಿಮಿನಲ್ ಪ್ರಕರಣಗಳು, ಸಂಚಾರಿ, ಲಘು ಪ್ರಕರಣಗಳು, ಮುನ್ಸಿಪಲ್ ಪ್ರಕರಣಗಳನ್ನು ಈ ಜನತಾ ನ್ಯಾಯಾಲಯದಲ್ಲಿ ಪರಿಹರಿಸಬಹುದು.
ಈ ಜನತಾ ನ್ಯಾಯಾಲಯದ ಪ್ರಯೋಜನವನ್ನು ಬ್ಯಾಂಕುಗಳು, ಹಣಕಾಸಿನ ಸಂಸ್ಥೆಗಳು, ವಿಮಾ ಕಂಪೆನಿಗಳು, ವಿವಿಧ ಸರಕಾರಿ ಇಲಾಖೆಗಳು ಮತ್ತು ಕಕ್ಷಿದಾರರು ಹಾಗೂ ಸಾರ್ವಜನಿಕರು ಇದರ ಲಾಭವನ್ನು ಪಡೆದುಕೊಳ್ಳಲು ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಇವರ ಪ್ರಕಟನೆ ತಿಳಿಸಿದೆ.