×
Ad

ಮತ್ತೆ ಯುರೋಪ್‌ಗೆ ಸೈಬರ್ ದಾಳಿ

Update: 2017-06-27 20:49 IST

ಉಕ್ರೈನ್, ಜೂ. 27: ಸರ್ವರ್‌ಗಳ ಮೇಲೆ ಬುಧವಾರ ದೊಡ್ಡ ಮಟ್ಟದ ಸೈಬರ್ ದಾಳಿ ನಡೆಯಲಿದೆ. ಇದರಿಂದ ಉಕ್ರೈನ್‌ನ ಸಮೀಪದಲ್ಲಿರುವ ಮುಖ್ಯ ವಿಮಾನ ನಿಲ್ದಾಣ ಹಾಗೂ ಕೆಲವು ಬ್ಯಾಂಕ್‌ಗಳಲ್ಲಿನ ಸರ್ವರ್ ವ್ಯವಸ್ಥೆ ಹಾನಿಗೀಡಾಗಲಿದೆ ಎಂದು ರಶ್ಯದ ಅಗ್ರ ತೈಲ ಉತ್ಪಾದನ ಕಂಪೆನಿ ರೋಸ್‌ನೆಫ್ಟ್ ಹೇಳಿದೆ. ಹ್ಯಾಕರ್‌ಗಳು ಯುರೋಪಿನಾದ್ಯಂತ, ಮುಖ್ಯವಾಗಿ ಉಕ್ರೈನ್‌ನಲ್ಲಿ ತೀವ್ರವಾಗಿ ಹಾನಿ ಮಾಡುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.

ಉಕ್ರೈನ್‌ನ ಪವರ್ ಗ್ರಿಡ್, ಬ್ಯಾಂಕ್, ಸರಕಾರಿ ಕಚೇರಿಗಳಲ್ಲಿ ಗಂಭೀರ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಕಂಪೆನಿ ಹಾಗೂ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ನಾವು ಸೈಬರ್ ದಾಳಿ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ. ಇದು ನಮ್ಮ ಉದ್ಯಮದ ಎಲ್ಲ ಶಾಖೆಗಳ ಮೇಲೆ ದುಷ್ಪರಿಣಾಮ ಉಂಟು ಮಾಡಲಿದೆ ಎಂದು ಕೋಪನ್‌ಹೇಗ್ ಮೂಲದ ಕಂಪೆನಿಯ ವಕ್ತಾರ ಆ್ಯಂಡೆರ್ಸ್ ರೋಸ್‌ನೆಫ್ಟ್ ಹೇಳಿದ್ದಾರೆ.

ಸರಕಾರದ ಕೇಂದ್ರ ಕಚೇರಿಯಲ್ಲಿರುವ ಕಂಪ್ಯೂಟರ್‌ಗಳು ಶಟ್‌ಡೌನ್ ಆಗಲಿದೆ ಎಂದು ಟ್ಲಟ್ಟರ್‌ನಲ್ಲಿ ಹೇಳಿಕೆ ನೀಡಿರುವ ಉಕ್ರೈನ್‌ನ ಉಪ ಪ್ರಧಾನಿ ಪಾವ್ಲೋ ರೊಜೆಂಖೋ, ಪರದೆ ಕಪ್ಪಾದ ಕಂಪ್ಯೂಟರ್‌ನ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News