×
Ad

ಇಬ್ಬರು ನಾಪತ್ತೆ

Update: 2017-06-27 21:10 IST

ಕಾರ್ಕಳ, ಜೂ.27: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹರನಾಳುವಿನ ದೇವಮ್ಮ ಎಂಬವರ ಮಗಳು ರೇಖಾ(19) ಹಾಗೂ ತಮ್ಮ ಬಸವರಾಜ(25) ಎಂಬವರು ಜೂ.11ರಿಂದ ಕಾರ್ಕಳ ಸಾಲ್ಮರದಿಂದ ನಾಪತ್ತೆ ಯಾಗಿದ್ದಾರೆ.

ಇವರು ಸಾಲ್ಮರ ಮಸೀದಿ ಬಳಿ ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ಕೆಲಸ ಮಾಡಿಕೊಂಡು ಅಲ್ಲಿಯೇ ಉಳಕೊಂಡಿದ್ದರು. ಜೂ.11ರಂದು ಅವರಿಬ್ಬರು ಯಾರಲ್ಲಿಯೂ ಹೇಳದೆ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News