ಅಮೆರಿಕಾದಲ್ಲಿ ಡಾ ವೀರೇಂದ್ರ ಹೆಗ್ಗಡೆಯವರಿಂದ ಎಸ್.ಡಿ.ಎಂ.ಐ.ಎಂ.ಡಿಯ ಅಂತಾರಾಷ್ಟ್ರೀಯ ಮಾನ್ಯತೆಯ ಪ್ರಶಸ್ತಿ ಸ್ವೀಕಾರ

Update: 2017-06-27 16:13 GMT

ಬೆಳ್ತಂಗಡಿ, ಜೂ. 27: ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲೆಪ್ಮೆಂಟ್ ಸಂಸ್ಥೆಯ (ಎಸ್‌ಡಿಎಂಐಟಿ) ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ ಮ್ಯಾನೇಜ್ಮೆಂಟ್ ಕೋರ್ಸ್‌ಗೆ ಅಮೆರಿಕಾದ ಅಕ್ರೆಡಿಟೇಷನ್ ಕೌನ್ಸಿಲ್ ಫಾರ್ ಬಿಸಿನೆಸ್ ಸ್ಕೂಲ್ಸ್ ಅಂಡ್ ಪ್ರೋಗ್ರಾಮ್ಸ್ (ಎಸಿಬಿಎಸ್‌ಪಿ) ಅವರಿಂದ ಮಾನ್ಯತೆಯ ಪ್ರಶಸ್ತಿ ದೊರಕಿದೆ.

ಸೋಮವಾರ ಅಮೆರಿಕಾದ ಲಾಸ್ ಏಂಜಲೀಸ್‌ನ ಅನಹೆಮ್ ನಗರದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ ಡಿ. ವೀರೇಂದ್ರ ಹೆಗ್ಗಡೆ ಅವರು ಸಂಸ್ಥೆಯ ನಿರ್ದೇಶಕ ಡಾ ಎನ್. ಆರ್. ಪರಶುರಾಮನ್‌ರೊಂದಿಗೆ ಚೀಫ್ ಅಕ್ರೆಡಿಟೇಷನ್ ಆಫೀಸರ್ ಡಾ. ಸ್ಟೀವ್ ಪಾರ್ಸ್ಕೆಲ್ ಹಾಗೂ ಬೋರ್ಡ್ ಆಫ್ ಕಮಿಷನರ್ನ್‌ನ ಅಧ್ಯಕ್ಷ ಡಾ. ರೇ ಎಲ್ಡ್ರಿಡ್ಜ್ ಅವರಿಂದ ಮಾನ್ಯತೆಯ ಪ್ರಶಸ್ತಿ ಸ್ವೀಕರಿಸಿದರು.  

ಭಾರತದಲ್ಲಿ ಇರುವ ‘ಬಿ’ ಶಾಲೆಗಳ ಪೈಕಿ ಯುರೋಪಿಯನ್ ಫೌಂಡೇಶನ್ ಫಾರ್ ಮ್ಯಾನೇಜ್ಮೆಂಟ್ ಡೆವಲೆಪ್ಮೆಂಟ್ (ಇಎಫ್‌ಎಂಡಿ) ಮತ್ತು (ಎಸಿಬಿಎಸ್‌ಪಿ) ಈ ಎರಡೂ ಮಾನ್ಯತೆಗಳನ್ನು ಪಡೆದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಎಸ್.ಡಿ.ಎಂ.ಐ.ಎಂ.ಡಿ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News