×
Ad

ಛಾಯಾಗ್ರಾಹಕ ಆಸ್ಟ್ರೋಮೋಹನ್‌ಗೆ ಅಮೆರಿಕನ್ ಐಸಿಎಲ್ ಫೆಲೋಶಿಪ್

Update: 2017-06-27 22:09 IST

ಉಡುಪಿ, ಜೂ.27: ಮಣಿಪಾಲದ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರಿಗೆ ಅಮೆರಿಕದ ಛಾಯಾಚಿತ್ರ ಸಂಸ್ಥೆ ಇಮೇಜ್ ಕೊಲೀಗ್ ಸೊಸೈಟಿ ಇಂಟರ್‌ನ್ಯಾಶನಲ್ (ಐಸಿಎಸ್) ಫೆಲೋಶಿಪ್ ಪದವಿ ನೀಡಿ ಗೌರವಿಸಿದೆ.

ಕಳೆದ ಸುಮಾರು ಎರಡೂವರೆ ದಶಕದಿಂದ ಛಾಯಾಚಿತ್ರ ಪತ್ರಿಕೋದ್ಯಮದಲ್ಲಿ ಮಾಡಿರುವ ವಿಶೇಷ ಸಾಧನೆಯನ್ನು ಗುರುತಿಸಿ ಐಸಿಎಸ್ ಸಂಸ್ಥೆ ಫೆಲೋಶಿಪ್ ನೀಡಿ ಪುರಸ್ಕರಿಸಿದೆ. ಆಸ್ಟ್ರೋ ಅವರಿಗೆ ಆರ್ಯಭಟ, ಕರ್ನಾಟಕ ಮಾಧ್ಯಮ ಅಕಾಡೆಮಿ, ಯುನಿಸಿಫ್‌ನಂತಹ ಪ್ರತಿಷ್ಠಿತ ಪ್ರಶಸ್ತಿಗಳು ಒಲಿದು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News