ಕಡಲು ಕೊರೆತ ತಡೆಗೆ ತುರ್ತು ಕ್ರಮಕ್ಕೆ ಸೂಚನೆ
Update: 2017-06-27 22:10 IST
ಉಡುಪಿ, ಜೂ.27: ಕಿದಿಯೂರು ಪಡುಕೆರೆಯಿಂದ ಉದ್ಯಾವರ ಪಡುಕೆರೆ ತನಕ ಕಡಲ್ಕೊರೆತ ಪ್ರದೇಶಕ್ಕೆ ಇಂದು ಭೇಟಿ ನೀಡಿದ ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು ಸಮಸ್ಯೆಗೆ ಕೂಡಲೇ ಸ್ಪಂದಿಸುವಂತೆ ಜಿಲ್ಲಾಧಿಕಾರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ರಘುಪತಿ ಭಟ್, ಅಂಬಲಪಾಡಿ ಗ್ರಾಪಂ ಅಧ್ಯಕ್ಷ ಪ್ರಮೋದ್ ಸಾಲ್ಯಾನ್, ಕಡೆಕಾರು ಗ್ರಾಪಂ ಅಧ್ಯಕ್ಷ ರಘುನಾಥ ಕೋಟ್ಯಾನ್, ತಾಪಂ ಸದಸ್ಯೆ ಶಿಲ್ಪಾ ಕೋಟ್ಯಾನ್, ಗ್ರಾಪಂ ಸದಸ್ಯರಾದ ರಾಘವೇಂದ್ರ ಕುತ್ಪಾಡಿ, ಗೀತಾ, ವೇದಾವತಿ, ಪ್ರಶಾಂತ್ ಸಾಲ್ಯಾನ್, ರಂಜನ್ ಪಡುಕೆರೆ, ವಸಂತ ಪಡುಕೆರೆ, ದಿನೇಶ್ ಮುಂತಾದವರು ಉಪಸ್ಥಿತರಿದ್ದರು.