ಜಿಎಸ್‌ಟಿ ಕುರಿತು ಅರಿವು ಕಾರ್ಯಕ್ರಮ
ಉಡುಪಿ, ಜೂ.28: ಉಡುಪಿ ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಶನ್ ವತಿಯಿಂದ ಜಿಎಸ್‌ಟಿ ಕುರಿತು ಅರಿವು ಕಾರ್ಯಕ್ರಮವನ್ನು ಬುಧವಾರ ಉಡುಪಿ ಕಿದಿಯೂರು ಹೊಟೇಲಿನ ಅನಂತಶಯನ ಹಾಲ್‌ನಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಆರ್.ಬಿ.ನಾಯಕ್ ಮಾತನಾಡಿ, ಹೊಸ ಕಾನೂನುಗಳು ಬರುವಾಗ ಗೊಂದಲಗಳು ಉಂಟಾಗುವುದು ಸಾಮಾನ್ಯ. ಆದುದರಿಂದ ಇಂತಹ ಕಾರ್ಯಾಗಾರಗಳಿಂದ ಗೊಂದಲ ನಿವಾರಣೆ ಮಾಡಿ ತಿಳುವಳಿಕೆ ಹೆಚ್ಚಿಸಲು ಸಾಧ್ಯವಾಗುತ್ತದೆ. ವ್ಯಾಟ್‌ನಲ್ಲಿರುವ ನಾಲ್ಕು ಅಂಗ ಜಿಎಸ್‌ಟಿಯಲ್ಲಿಯೂ ಇದೆ. ಆದರೆ ಜಿಎಸ್‌ಟಿಯದ್ದು ಮಾತ್ರ ವಿಭಿನ್ನವಾಗಿದೆ. ಜೂ.30ರ ಮಧ್ಯರಾತ್ರಿಯಿಂದ ಜಾರಿಗೆ ಬರಲಿರುವ ಜಿಎಸ್‌ಟಿಯನ್ನು ಎಲ್ಲರೂ ಸ್ವಾಗತಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ವಾಣಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಡಿ.ಶಂಭು ಭಟ್, ಸಹಾಯಕ ಆಯುಕ್ತೆ ಹೇಮಲತಾ ಎನ್. ಜಿಎಸ್‌ಟಿ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಅಧ್ಯಕ್ಷ ಪ್ರಸಾದ್ ಉಪಾ ಧ್ಯಾಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ದಿವಾ ಕರ ಶೆಟ್ಟಿ ವಂದಿಸಿದರು. ಜತೀಂದ್ರ ಮರವಂತೆ ಕಾರ್ಯಕ್ರಮ ನಿರೂಪಿಸಿದರು.