ವಿದ್ಯಾರ್ಥಿಗಳಿಗೆ ಪ್ರಶಿಕ್ಷಣ ಕಾರ್ಯಕ್ರಮ
ಉಡುಪಿ, ಜೂ.28: ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ 2017- 18ರ ಸಾಲಿನಲ್ಲಿ ವಿವಿಧ ಕೋರ್ಸುಗಳಿಗೆ ದಾಖಲಾತಿಯನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಶಿಕ್ಷಣ ಕಾರ್ಯಕ್ರಮವು ಇತ್ತೀಚೆಗೆ ಕಾಲೇಜಿನ ಪೂರ್ಣಪ್ರಜ್ಞ ಮಿನಿ ಆಡಿಟೋರಿಯಂನಲ್ಲಿ ಜರಗಿತು.
ನ್ಯಾಕ್‌ನ ಸಂಯೋಜಕಿ ದುರ್ಗಾಲಕ್ಷ್ಮಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ರಾಮಕೃಷ್ಣ ಉಡುಪ, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಸಂತೋಷ್ ಕುಮಾರ್, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜಕಿ ಮಲ್ಲಿಕಾ, ಪೂರ್ಣಪ್ರಜ್ಞ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ್ ರಾವ್, ಕಾಲೇಜು ಪರೀಕ್ಷಾ ವಿಭಾಗದ ಸಂಚಾಲಕಿ ಶಾಲಿನಿ, ದೈಹಿಕ ಶಿಕ್ಷಣ ನಿರ್ದೇಶಕ ಮಂಜುನಾಥ ಜೋಗಿ, ಕಾಲೇಜಿನ ಮಹಿಳಾ ವೇದಿಕೆಯ ಸಂಚಾಲಕಿ ಲವಿಟಾ ಡಿಸೋಜ ಮಾತನಾಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಸುಕನ್ಯಾ ಮೇರಿ ಜೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ಸ್ವಾಗತಿಸಿದರು. ಶ್ರೀಲತಾ ವಂದಿಸಿದರು. ರಾಘವೇಂದ್ರ ಜಿ.ಜಿ. ಕಾರ್ಯಕ್ರಮ ನಿರೂಪಿಸಿದರು.