ಮಲೆಯಾಳಿ ಕ್ರಿಶ್ಚಿಯನ್ ಎಸೋಸಿಯೇಶನ್ ನೂತನ ಅಧ್ಯಕ್ಷರಾಗಿ ಎ.ಜೆ ಅಜಯ್ ಆಯ್ಕೆ
ಬೆಳ್ತಂಗಡಿ, ಜೂ.28: ಮಲೆಯಾಳಿ ಕ್ರಿಶ್ಚಿಯನ್ ಎಸೋಸಿಯೇಶನ್ ಬೆಳ್ತಂಗಡಿ ಇದರ ನೂತನ ಅಧ್ಯಕ್ಷರಾಗಿ ಎ.ಜೆ ಅಜಯ್ ಹಾಗೂ, ಪ್ರಧಾನ ಕಾರ್ಯದರ್ಶಿಯಾಗಿ ವಿನ್ಸೆಂಟ್ ಬಂಗಾಡಿ ಆಯ್ಕೆಯಾಗಿದ್ದಾರೆ.
ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸಂಘದ ರಾಜ್ಯ ಅಧ್ಯಕ್ಷರಾದ ಎ.ಸಿ ಜಯರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರುಗಳಾಗಿ ಬಿಜು ವೇಣೂರು, ಸೆಬಾಸ್ಟಿಯನ್ ಕಾಯರ್ತಡ್ಕ, ಜೋಜೋ ನಿರ್ಮಲ ನೆರಿಯ, ಕುರಿಯಾಕೋಸ್ ಶಿಬಾಜೆ, ಹಾಗೂ ಜೋನಿ ಗಂಡಿಬಾಗಿಲು ಅವರನ್ನು ಸಂಘಟನಾ ಕಾರ್ಯದರ್ಶಿಗಳಾಗಿ ಬರ್ಕ್‌ಮನ್ಸ್ ಕೊಯ್ಯೂರು, ಫ್ರಾನ್ಸೀಸ್ ಚೆರಿಯಾನ್ ಅವರನ್ನೂ, ಜತೆ ಕಾರ್ಯದರ್ಶಿಯಾಗಿ ಜೋಸ್ ಧರ್ಮಸ್ಥಳ, ಕೋಶಾಧಿಕಾರಿಯಾಗಿ ಜೇಮ್ಸ್ ಕಾಶಿಬೆಟ್ಟು ಅವರನ್ನೂ ಆಯ್ಕೆ ಮಾಡಲಾಯಿತು.
ಯುವ ವಿಭಾಗದ ಅಧ್ಯಕ್ಷರಾಗಿ ಸಜೇಶ್ ಧರ್ಮಸ್ಥಳ, ಕಾರ್ಯದರ್ಶಿಯಾಗಿ ಜಸ್ಟಿನ್ ಕೊಕ್ಕಡ, ಉಪಾಧ್ಯಕ್ಷರಾಗಿ ಶಿಂಟೋ ಶಿಬಾಜೆ, ಅವರನ್ನೂ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ಸಮಿತಿಯ ಕಾರ್ಯದರ್ಶಿ ಸಾಬು ಜಿಲ್ಲಾ ಸಮಿತಿ ಸದಸ್ಯರುಗಳಾದ ಅಗಸ್ಟಿನ್ ನಡ, ವಿಜೆ ಸೆಬಾಸ್ಟಿಯನ್ ಕೊಕ್ಕಡ, ಎ.ಸಿ ಮ್ಯಾಧ್ಯೂ ಹಾಗೂ ಇತರರು ಉಪಸ್ಥಿತರಿದ್ದರು.