ಪೇಜಾವರ ಶ್ರೀಗೆ ಜಿಲ್ಲಾ ಜೆಡಿಎಸ್ ಬೆಂಬಲ
ಉಡುಪಿ, ಜೂ.28: ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಇಂದು ಉಡುಪಿ ಜಿಲ್ಲಾ ಜೆಡಿಎಸ್ ಮುಖಂಡರು ಮಠಕ್ಕೆ ತೆರಳಿ ಪರ್ಯಾಯ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿಯನ್ನು ಭೇಟಿ ಮಾಡಿ ಬೆಂಬಲ ಘೋಷಿಸಿದ್ದಾರೆ.
ಈ ವಿಚಾರದಲ್ಲಿ ಕೆಲವರು ಪ್ರಚಾರಕ್ಕಾಗಿ ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಈ ಕ್ರಮವನ್ನು ನಾವು ಖಂಡಿಸುತ್ತೇವೆ. ಸ್ವಾಮೀಜಿಯನ್ನು ಭೇಟಿ ಮಾಡಿ ಪಕ್ಷದ ಬೆಂಬಲ ತಿಳಿಸಿದ್ದೇವೆ. ಮಠಕ್ಕೆ ಎಲ್ಲ ಧರ್ಮದವರು ಕೊಡುಗೆ ನೀಡಿರುವ ಕುರಿತು ಇತಿಹಾಸ ಇದೆ. ಪೇಜಾವರ ಶ್ರೀ ವಿರುದ್ಧ ಪ್ರತಿಭಟನೆ ಮಾಡಿದರೆ ನಾವು ಸ್ವಾಮೀಜಿ ಪರವಾಗಿ ನಿಲ್ಲುತ್ತೇವೆ. ಮುಂದಿನ ದಿನ ಗಳಲ್ಲಿ ಹಿಂದೂಗಳ ಹಬ್ಬವನ್ನು ಎಲ್ಲ ಧರ್ಮೀಯರು ಒಗ್ಗಟ್ಟಾಗಿ ಆಚರಿಸುವ ಮೂಲಕ ಸೌಹಾರ್ಧ ವಾತಾವರಣವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಶಾಲಿನಿ ಶೆಟ್ಟಿ ಕೆಂಚನೂರು, ಜಯರಾಮ್, ಸಚಿನ್ ಜೆ.ಎ., ಜಯಕುಮಾರ್ ಪರ್ಕಳ, ಶೇಖರ್ ಕೋಟ್ಯಾನ್, ಅಬ್ದುಲ್ ರಝಾಕ್, ಅಬ್ದುಲ್ ಖಾದರ್ ಕುಂಜಾಲು, ಮನ್ಸೂರು ಇಬ್ರಾಹಿಂ, ರಮೇಶ್, ವೇದಾವತಿ ಹೆಗ್ಡೆ, ವಿಶಾಲಕ್ಷ್ಮಿ ಶೆಟ್ಟಿ ಮೊದ ಲಾದವರು ಉಪಸ್ಥಿತರಿದ್ದರು.