ಎಸೆಸೆಲ್ಸಿ ಪರೀಕ್ಷೆ ಅನುತ್ತೀರ್ಣ : ಪತ್ನಿ ಹತ್ಯೆಗೈದ ಪತಿ

Update: 2017-06-28 14:08 GMT

ಪಾಟ್ನಾ, ಜೂ. 28: ಬಿಹಾರದ 10ನೇ ತರಗತಿ ಪರೀಕ್ಷೆ ಅನುತ್ತೀರ್ಣರಾದ ಪತ್ನಿಯನ್ನು ಪತಿ ಹತ್ಯೆಗೈದ ಘಟನೆ ಔರಂಗಾಬಾದ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಿನ್ನೆಲೆಯಲ್ಲಿ ನನ್ನ ಅಳಿಯ 22 ಹರೆಯದ ಇಂದ್ರಜಿತ್ ಪಾಸ್ವಾನ್ ಪುತ್ರಿ ಸೋನಿ ದೇವಿಗೆ ವಿಷ ಹಾಕಿ ಹತ್ಯೆ ಮಾಡಿದ್ದಾನೆ ಎಂದು ಲಖ್‌ಪಾಟಿಯಾ ಕುನ್ವಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

12 ತರಗತಿ ಮಾತ್ರ ಉತ್ತೀರ್ಣರಾಗಿರುವ ಆರೋಪಿ ದಿನಗೂಲಿ ನೌಕರನಾಗಿ ದುಡಿಯುತ್ತಿದ್ದಾನೆ. ಆತನನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಔರಂಗಾಬಾದ್‌ನ ನ್ಯೂರಾದಲ್ಲಿರುವ ಪ್ರೌಢ ಶಾಲೆಯಲ್ಲಿ ದೇವಿ ಪರೀಕ್ಷೆ ಬರೆದಿದ್ದರು. ಕಳೆದ ವರ್ಷ ಕೂಡ ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದರು.

ಇಂದ್ರಜಿತ್ ಪಾಸ್ವಾನ್ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದ. ಅಲ್ಲದೆ ಪರೀಕ್ಷೆಯಲ್ಲಿ ಈ ಬಾರಿಯೂ ಉತ್ತೀರ್ಣರಾಗದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಕುನ್ವಾರ್ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News