ತಂಬಾಕು ಮಾರಾಟ: ಅಂಗಡಿಗಳ ಮೇಲೆ ದಾಳಿ
Update: 2017-06-28 19:38 IST
ಉಡುಪಿ, ಜೂ.28: ಜಿಲ್ಲೆಯಲ್ಲಿ ಕೋಟ್ಪಾ 2003 ಕಾಯ್ದೆಯನ್ನು ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳವು ಕಾರ್ಕಳ ತಾಲೂಕಿನ ದೂಪದಕಟ್ಟೆ ಮತ್ತು ನಿಟ್ಟೆ ಪ್ರದೇಶಗಳಲ್ಲಿ ವಿವಿಧ ತಂಬಾಕು ಮಾರಾಟದ ಅಂಗಡಿ, ಹೊಟೇಲ್ ಹಾಗೂ ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ದಾಳಿ ನಡೆಸಿ ಸೆಕ್ಷನ್ 4,6(ಎ) ಮತ್ತು 6(ಬಿ) ಅಡಿಯಲ್ಲಿ 35 ಪ್ರಕರಣಗಳನ್ನು ದಾಖಲಿಸಿ 5300ರೂ. ದಂಡ ವಸೂಲಿ ಮಾಡಿದೆ. ಇದೇ ವೇಳೆ ಸೆಕ್ಷನ್ 4,6(ಎ) ಮತ್ತು 6(ಬಿ) ಅಡಿಯಲ್ಲಿ ನಾಮಫಲಕಗಳನ್ನು ವಿತರಿಸಲಾಯಿತು.
ಈ ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಾದ ಡಾ.ವಾಸುದೇವ, ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ್, ಜಿಲ್ಲಾ ಆರೋಗ್ಯ ಮೇಲ್ವಿ ಚಾರಕ ಆನಂದ ಗೌಡ, ಹಿರಿಯ ಆರೋಗ್ಯ ಸಹಾಯಕ ಶಿವರಾಮ್ ಭಟ್, ಶಿಕ್ಷಣ ಇಲಾಖೆಯ ಸಿದ್ದಪ್ಪ, ಕಾರ್ಕಳ ಗ್ರಾಮೀಣ ಪೋಲೀಸ್ ಠಾಣೆಯ ಆರಕ್ಷಕರು ಮತ್ತು ವಾಹನ ಚಾಲಕರಾದ ದಿನೇಶ್ ಪ್ರಭು ಮತ್ತು ಸತೀಶ್ ಉಪಸ್ಥಿತರಿದ್ದರು.