‘ವರ್ಲ್ಡ್ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ -2017’: ಪದಕ ವಿಜೇತ ವಕೀಲ ಡಿ. ಪದ್ಮನಾಭ ಕುಮಾರಿಗೆ ಸನ್ಮಾನ
Update: 2017-06-28 21:03 IST
ಮಂಗಳೂರು, ಜೂ. 28: ನ್ಯೂಜಿಲ್ಯಾಂಡ್‌ನ ಓಕ್‌ಲ್ಯಾಂಡ್‌ನಲ್ಲಿ ಇತ್ತೀಚೆಗೆ ನಡೆದ ‘ವರ್ಲ್ಡ್ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ -2017’ನಲ್ಲಿ ಪಾಲ್ಗೊಂಡು 200 ಮೀಟರ್ ಮತ್ತು 400 ಮೀಟರ್ ಓಟದಲ್ಲಿ ಪದಕ ಪಡೆದ ವಕೀಲ ಡಿ.ಪದ್ಮನಾಭ ಕುಮಾರ್ (ಪನ್ನ ಪ್ರಸಾದ್)ಅವರನ್ನು ಮಂಗಳೂರಿನ ಬಂದರು ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ಎಜಿಎಂ ಉದಯ ಕುಮಾರ್ ಬಿ.ವಿ., ಪ್ರಬಂಧಕ ರಾಮಚಂದ್ರ ಶಾನುಭಾಗ್, ಉಪ ಪ್ರಬಂಕ ಜಯ ಎರ್ಮಾಳ್, ಮುಖ್ಯ ಸಂಯೋಜಕ ರವೀಂದ್ರ ಪೈ, ಸಂಯೋಜಕ ಪ್ರಶಾಂತ್ ಉಪಸ್ಥಿತರಿದ್ದರು.