ಭಾರತಕ್ಕೆ ಸಂಪನ್ಮೂಲ, ತಂತ್ರಜ್ಞಾನ ನೀಡಲು ಅಮೆರಿಕ ಬದ್ಧ: ಮೈಕ್ ಪೆನ್ಸ್ ಘೋಷಣೆ

Update: 2017-06-28 16:11 GMT

ವಾಶಿಂಗ್ಟನ್, ಜೂ. 28: ವಲಯದ ಭದ್ರತೆಗೆ ಪೂರಕವಾದ ಸಂಪನ್ಮೂಲಗಳು ಮತ್ತು ತಂತ್ರಜ್ಞಾನವನ್ನು ಪಡೆಯಲು ಭಾರತದ ಸಶಸ್ತ್ರ ಪಡೆಗಳಿಗೆ ಅಮೆರಿಕ ನೆರವು ನೀಡುವುದು ಎಂದು ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಹೇಳಿದ್ದಾರೆ.

‘‘ಅಮೆರಿಕವು ಭಾರತಕ್ಕೆ ಸೀ ಗಾರ್ಡಿಯನ್ ಯುಎವಿಗಳು, ಅಪಾಚೆ ಹೆಲಿಕಾಪ್ಟರ್‌ಗಳು ಮತ್ತು ಸಿ-17 ಸಾರಿಗೆ ವಿಮಾನಗಳನ್ನು ಮಾರಾಟ ಮಾಡುತ್ತದೆ ಎಂಬ ನಿನ್ನೆಯ ಘೋಷಣೆ ಅಂತಿಮವಾದುದು’’ ಎಂದರು.
ಮಾರಾಟಕ್ಕೆ ಅನುಮೋದನೆ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

‘‘ಪ್ರಥಮ ದರ್ಜೆಯ ಜಾಗತಿಕ ಶಕ್ತಿಗೆ ಪ್ರಥಮ ದರ್ಜೆಯ ಸೇನೆಯ ಅಗತ್ಯವಿದೆ. ಭಾರತೀಯ ಜನತೆಯನ್ನು ರಕ್ಷಿಸಲು ಮತ್ತು ವಲಯದ ಭದ್ರತೆಗೆ ಬೆಂಬಲ ನೀಡಲು ಅಗತ್ಯವಾದ ಸಂಪನ್ಮೂಲಗಳು ಮತ್ತು ತಂತ್ರಜ್ಞಾನವನ್ನು ಪಡೆಯಲು ಭಾರತಕ್ಕೆ ಅಮೆರಿಕವು ನಿರಂತರ ಬೆಂಬಲ ನೀಡಲಿದೆ’’ ಎಂದು ಪೆನ್ಸ್ ಹೇಳಿದರು.

ಭಾರತ-ಅಮೆರಿಕ ವ್ಯಾಪಾರ ಮಂಡಳಿಯನ್ನು ಉದ್ದೇಶಿಸಿ ಮಾಡಿದ ಪ್ರಧಾನ ಭಾಷಣದಲ್ಲಿ ಅವರು ಈ ಮಾತುಗಳನ್ನು ಹೇಳಿದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News