ಸರ, ಮೊಬೈಲ್ ಕಳವು: ಆರೋಪಿಗಳಿಬ್ಬರ ಸೆರೆ
ಮಂಗಳೂರು, ಜೂ.28: ನೆಹರೂ ಮೈದಾನದ ಬಳಿಯಿಂದ ನಡೆದುಕೊಂಡು ಹೋಗುತ್ತಿದ್ದ ಸಿಟಿ ಸೆಂಟರ್ ಉದ್ಯೋಗಿಯೊಬ್ಬರಿಂದ ಮೊಬೈಲ್ ಮತ್ತು ಚಿನ್ನದ ಸರವನ್ನು ಎಳೆದು ಪರಾರಿಯಾಗಿದ್ದ ಪ್ರಕರಣದಲ್ಲಿ ಇಬ್ಬರನ್ನು ಪಾಂಡೇಶ್ವರ ಠಾಣಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಶಿವಮೊಗ್ಗದ ನಿವಾಸಿ ಶಿವಕುಮಾರ್ (38) ಮತ್ತು ಗದಗ ನಿವಾಸಿ ಮುತ್ತು (39) ಬಂಧಿತ ಆರೋಪಿಗಳು. ಆರೋಪಿಗಳಿಂದ 10 ಸಾವಿರ ನಗದು ಮತ್ತು 40ಸಾವಿರ ರೂ. ವೌಲ್ಯದ ಚಿನ್ನದ ಸರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಟಿ ಸೆಂಟರ್‌ನ ಉದ್ಯೋಗಿ ಮಂಜೇಶ್ವರದ ಲೋಕೇಶ್ ಎಂಬವರು ಜೂ. 26ರಂದು ಸಿಟಿ ಸೆಂಟರ್‌ನಿಂದ ಕೆಲಸ ಮುಗಿಸಿ ನೆಹರೂ ಮೈದಾನದ ಬಳಿಯಿಂದ ಪಾದಚಾರಿಯಾಗಿ ಹೋಗುತ್ತಿದ್ದ ಸಂದರ್ಭದಲ್ಲಿ ಇಬ್ಬರು ಇವರನ್ನು ಅಡ್ಡಗಟ್ಟಿ ಒಂದು ಮೊಬೈಲ್ ಫೋನ್ ಮತ್ತು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದರು. ಈ ಬಗ್ಗೆ ಲೋಕೇಶ್ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬುಧವಾರ ನೆಹರೂ ಮೈದಾನದ ಫುಟ್‌ಪಾತ್ ರಸ್ತೆ ಬಳಿಯಿಂದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳವುಗೈದಿರುವುದು ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಮೊಬೈಲ್ ಫೋನ್ ಮತ್ತು ಚಿನ್ನದ ಸರ ಸಹಿತ 50 ಸಾವಿರ ರೂ. ವೌಲ್ಯದ ಸೊತ್ತನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.