×
Ad

ಬಾಲಕಿಯ ಅಪರಹಣ: ದೂರು

Update: 2017-06-28 22:11 IST

ಕುಂದಾಪುರ, ಜೂ.28: ತಲ್ಲೂರು ಗ್ರಾಮದ ಬಳಿ ವಾಸ ವಾಗಿರುವ ಲಲಿತಾ ಎಂಬವರ ಪುತ್ರಿ ವನಿತಾ(17) ಎಂಬಾಕೆ ಜೂ.10ರಂದು ಬೆಳಗ್ಗೆ 8 ಗಂಟೆಗೆ ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾಳೆ.

ಈಕೆಯನ್ನು ಸ್ಥಳೀಯ ನಿವಾಸಿ ಉದಯ ಎಂಬವರು ಅಪಹರಣ ಮಾಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಾಲಕಿ 5 ಅಡಿ 2 ಇಂಚು ಉದ್ದ, ಸಪೂರ ಶರೀರ, ದುಂಡನೆಯ ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ, ಕಿವಿಯಲ್ಲಿ ಗುಂಡಿನ ಓಲೆ, ಮೂಗಿನಲ್ಲಿ ಮೂಗಿನ ಓಲೆ ಧರಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News