×
Ad

​ಪೇಜಾವರ ಶ್ರೀ ಅವಹೇಳನ: ದೂರು

Update: 2017-06-28 22:19 IST

ಉಡುಪಿ, ಜೂ.28: ಶ್ರೀ ಕೃಷ್ಣ ಮಠದಲ್ಲಿ ಇಫ್ತಾಕ್ ಕೂಟ ನಡೆಸಿರುವ ವಿಚಾರದಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇನಕಾರಿಯಾದ ಹೇಳಿಕೆ ಪೋಸ್ಟ್ ಮಾಡಿರುವ ಧಾರವಾಡದ ವಿವೇಕ್ ಕಡೆಮನಿ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ವಿವೇಕ್ ಕಡೆಮನಿ ಫೇಸ್‌ಬುಕ್‌ನಲ್ಲಿ ಪೇಜಾವರ ಸ್ವಾಮೀಜಿ ಬಗ್ಗೆ ಅವಾಚ್ಯ ಶಬ್ದಗಳಿಂದ ಬೈದು ಅವಹೇಳನ ಮಾಡಿದ್ದಾನೆ. ಈತನ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಉಡುಪಿ ಪೊಲೀಸರಿಗೆ ಇಂದು ದೂರು ನೀಡಿದ್ದಾರೆ.

'ಅನ್ಸಾರ್ ಅಹ್ಮದ್ ನೀಡಿದ ದೂರನ್ನು ಸ್ವೀಕರಿಸಿದ್ದೇವೆ. ಈ ಕುರಿತು ಪರಿ ಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ’ ಎಂದು ನಗರ ಠಾಣಾಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News