ಮನೆಗೆ ನುಗ್ಗಿ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
Update: 2017-06-28 22:28 IST
ಮಣಿಪಾಲ, ಜೂ.28: ಅನಂತ ನಗರ ಹುಡ್ಕೋ ಕಾಲನಿಯ ಮನೆಯೊಂದಕ್ಕೆ ನುಗ್ಗಿದ ಕಳ್ಳರು 4 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಈ ಕಳವು ಜೂ. 25ರ ಸಂಜೆಯಿಂದ ಜೂ. 27ರ ಮಧ್ಯಾವಧಿಯಲ್ಲಿ ನಡೆದಿದೆ. ಹುಡ್ಕೋ ಕಾಲನಿಯ ಗೋವರ್ಧನ ಪ್ರಭು ಎಂಬವರ ಮನೆಯಲ್ಲಿ ಕಳವು ನಡೆದಿದ್ದು, ಕಪಾಟಿನಲ್ಲಿದ್ದ ಒಟ್ಟು 25 ಪವನ್ ತೂಕದ ಒಂದು ಜೊತೆ ಬಂಗಾರದ ಬಳೆ, ಚಿನ್ನದ ಬ್ರಾಸ್ಲೈಟ್, ಚಿನ್ನದ ಕರಿಮಣಿ ಸರ, ಮೂರು ಉಂಗುರ, ಒಂದು ಜೊತೆ ವಜ್ರದ ಜುಮ್ಕಿ, ಒಂದು ಜೊತೆ ಕಿವಿಯ ಆಭರಣ, ಗೋಲ್ಡ್ ನೆಕ್ಲೆಸ್‌ಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.