×
Ad

ವ್ಯಕ್ತಿ ನಾಪತ್ತೆ

Update: 2017-06-29 18:05 IST

ಕಡಬ, ಜೂ. 29: ಅಲಂಕಾರು ಗ್ರಾಮದ ಪಜ್ಜಡ್ಕ ನಿವಾಸಿ ದುಗ್ಗಣ್ಣ ಗೌಡ ಎಂಬವರ ಪುತ್ರ ಉಮ್ಮಣ್ಣ ಗೌಡ (54) ಬುಧವಾರ  ಕಡಬಕ್ಕೆಂದು ಮನೆಯಿಂದ ತೆರಳಿದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಮನೆಯವರು ಸಂಬಂಧಿಕರ ಮನೆಯಲ್ಲೆಲ್ಲಾ ವಿಚಾರಿಸಿದ್ದು, ಪತ್ತೆಯಾಗದೆ ಇರುವುದರಿಂದ ಉಮ್ಮಣ್ಣ ಗೌಡರ ತಮ್ಮ ಉಮೇಶ್ ಗೌಡ ಗುರುವಾರ ಕಡಬ ಠಾಣೆಗೆ ದೂರು ನೀಡಿದ್ದಾರೆ.

ನಾಪತ್ತೆಯಾದವರ ಚಹರೆ: 5.6  ಎತ್ತರವಾಗಿದ್ದು, ಸಪೂರ ಶರೀರ, ಬಿಳಿ ತಲೆಗೂದಲನ್ನು ಹೊಂದಿರುತ್ತಾರೆ. ಎಣ್ಣಿ ಕಪ್ಪು ಮೈಬಣ್ಣ ಹೊಂದಿದ್ದು, ಬಿಳಿ ಬಣ್ಣದ ಅಂಗಿ ಹಾಗೂ ಕಾವಿ ಬಣ್ಣದ ಲುಂಗಿಯನ್ನು ಧರಿಸಿರುವ ಇವರು ಕನ್ನಡ ಹಾಗೂ ತುಳು ಭಾಷೆಯನ್ನು ಬಲ್ಲವರಾಗಿರುತ್ತಾರೆ. ಇವರನ್ನು ಕಂಡವರು ಕಡಬ ಠಾಣೆಗೆ 9480805364 ಅಥವಾ ಪೊಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಬೇಕಾಗಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News