×
Ad

ಅಮೆರಿಕದ ಪೆರು ರಾಯಭಾರಿಯಾಗಿ ಭಾರತೀಯ ಅಮೆರಿಕನ್

Update: 2017-06-29 18:53 IST

ವಾಶಿಂಗ್ಟನ್, ಜೂ. 29: ಭಾರತೀಯ ಅಮೆರಿಕನ್ ವಿದೇಶ ಸೇವೆ ಅಧಿಕಾರಿ ಕೃಷ್ಣ ಆರ್. ಅರಸ್‌ರನ್ನು ಪೆರು ದೇಶಕ್ಕೆ ಅಮೆರಿಕದ ಮುಂದಿನ ರಾಯಭಾರಿಯನ್ನಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಿಸಿದ್ದಾರೆ.

ಈ ವಿಷಯವನ್ನು ಶ್ವೇತಭವನ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯಾಗಿರುವ ನಿಕ್ಕಿ ಹೇಲಿ ಬಳಿಕ, ಅರಸ್ ಅವರು ಟ್ರಂಪ್‌ರ ಎರಡನೆ ಭಾರತೀಯ ಅಮೆರಿಕನ್ ರಾಯಭಾರಿಯಾಗಿದ್ದಾರೆ.

ಈ ಮೊದಲು ಅಮೆರಿಕದ ರಾಯಭಾರಿಗಳಾಗಿ ಕಾರ್ಯನಿರ್ವಹಿಸಿದ ಭಾರತೀಯ ಅಮೆರಿಕನ್ನರ ಪಟ್ಟಿ ಇಲ್ಲಿದೆ:

ವಿನಯ್ ತುಮ್ಮಳಪಳ್ಳಿ (ಮಧ್ಯ ಅಮೆರಿಕ ಖಂಡದ ದೇಶ ಬಲೀಝ್-ಮೊದಲು ಇದರ ಹೆಸರು ಬ್ರಿಟಿಶ್ ಹೊಂಡುರಾಸ್ ಎಂದಾಗಿತ್ತು-ಗೆ), ರಿಚ್ ವರ್ಮ (ಭಾರತಕ್ಕೆ), ಅತುಲ್ ಕಶ್ಯಪ್ (ಶ್ರೀಲಂಕಾಗೆ) ಮತ್ತು ಗೀತಾ ಪಸ್ಸಿ (ಚಾಡ್‌ಗೆ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News