ವಿಶ್ವಸಂಸ್ಥೆ ನಿಧಿಗೆ 100,000 ಅಮೆರಿಕನ್ ಡಾಲರ್: ಮೊದಲ ಕೊಡುಗೆ ನೀಡಿದ ಭಾರತ

Update: 2017-06-29 14:23 GMT

ವಿಶ್ವಸಂಸ್ಥೆ, ಜೂ. 29: ತೆರಿಗೆ ಸಮಸ್ಯೆಗಳ ಬಗೆಗಿನ ಚರ್ಚೆಯಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಂಡ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ನೆರವು ನೀಡಲು ಭಾರತ ವಿಶ್ವಸಂಸ್ಥೆ ನಿಧಿಗೆ 100,000 ಅಮೆರಿಕನ್ ಡಾಲರ್ ಕೊಡುಗೆ ನೀಡಿದೆ. ಇದರೊಂದಿಗೆ ಪ್ರಪ್ರಥಮವಾಗಿ ಕೊಡುಗೆ ನೀಡಿದ ದೇಶ ಎನ್ನುವ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ತೆರಿಗೆ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಹಕಾರಕ್ಕಿರುವ ವಿಶ್ವಸಂಸ್ಥೆಯ ಟ್ರಸ್ಟ್ (ವಿಶ್ವಸಂಸ್ಥೆಯ ತೆರಿಗೆ ನಿಧಿ) ಭಾರತದಿಂದ ಪ್ರಥಮ ಹಣಕಾಸಿನ ಸ್ವಯಂಪ್ರೇರಿತ ಕೊಡುಗೆ ಸ್ವೀಕರಿಸಿದೆ ಎಂದು ಕಚೇರಿಗಳ ಅಭಿವೃದ್ಧಿಗಾಗಿ ಹಣಕಾಸು ನೀಡುವ ವಿಶ್ವಸಂಸ್ಥೆಯ ಆರ್ಥಿಕ ವಿಭಾಗ ಹಾಗೂ ಸಾಮಾಜಿಕ ವ್ಯವಹಾರಗಳ ಕಚೇರಿ ಘೋಷಿಸಿದೆ. ತೆರಿಗೆ ಸಮಸ್ಯೆಗಳಲ್ಲಿ ಅಂತಾರಾಷ್ಟ್ರೀಯ ಸಹಕಾರ (ವಿಶಸಂಸ್ಥೆಯ ತೆರಿಗೆ ಸಮಿತಿ)ದ ಬಗ್ಗೆ ತಜ್ಞರ ಸಮಿತಿಯ ಕಾರ್ಯನಿರ್ವಹಣೆಯನ್ನು ಬೆಂಬಲಿಸುವ ಉದ್ದೇಶವನ್ನು ವಿಶ್ವಸಂಸ್ಥೆ ತೆರಿಗೆ ಟ್ರಸ್ಟ್ ನಿಧಿ ಹೊಂದಿದೆ.

ವಿಶ್ವಸಂಸ್ಥೆ ನಿಧಿಗೆ ಸ್ವಯಂಪ್ರೇರಿತ ಕೊಡುಗೆ ನೀಡುವಂತೆ ವಿನಂತಿಸಿತ್ತು ಹಾಗೂ ಈ ಸಮಿತಿ 2006ದಿಂದ ಅಸ್ತಿತ್ವಕ್ಕೆ ಬಂದಿತ್ತು.

2015ರಲ್ಲಿ ಅಭಿವೃದ್ಧಿಗಾಗಿ ಹಣಕಾಸು ಕುರಿತು ನಡೆದ ಮೂರನೇ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಆ್ಯಡಿಸ್ ಅಬಬ ಕ್ರಿಯಾ ಕಾರ್ಯಯೋಜನೆಯ ಸ್ವೀಕಾರ ಕೂಡ ಕೊಡುಗೆ ನೀಡುವಂತೆ ಆಗ್ರಹಿಸಲು ಒತ್ತಾಸೆ ನೀಡಿತು ಎಂದು ವಿಶ್ವಸಂಸ್ಥೆಯ ವಿಭಾಗ ಹೇಳಿದೆ.

ತಮ್ಮ ಕರೆಗೆ ಓಗೊಟ್ಟು 100,000 ಅಮೆರಿಕನ್ ಡಾಲರ್ ಕೊಡುಗೆ ನೀಡಿದ ಮೊದಲ ದೇಶ ಭಾರತ. ಇದನ್ನು ಪ್ರಸ್ತುತ ನಿಧಿರಹಿತವಾಗಿರುವ ವಿಶ್ವಸಂಸ್ಥೆಯ ತೆರಿಗೆ ಸಮಿತಿಯ ಉಪ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಹೆಚ್ಚಿನ ನೆರವು ನೀಡಲು ಬಳಸಲಾಗುವುದು ಎಂದು ವಿಭಾಗ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News