ಮಹಿಳೆಯರ ಆರೋಗ್ಯ ತಪಾಸಣಾ ಶಿಬಿರ

Update: 2017-06-29 13:46 GMT

ಮಂಗಳೂರು, ಜೂ. 29: ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಜು.3ರಿಂದ 14ರವರೆಗೆ ಸಂಜೆ 4 ಗಂಟೆಯಿಂದ 5:30ರವರೆಗೆ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ.

ಸಾಮಾನ್ಯ ಆರೋಗ್ಯ ತಪಾಸಣೆ ಮಾಡಬಯಸುವವರು ಮತ್ತು ಮುಟ್ಟಿನ ಅಸಮರ್ಪಕತೆ, ಪೆಲ್ವಿಕ್ ಸೋಂಕು, ಗರ್ಭಕೋಶದ ಫೈಬ್ರಾಯ್ಡಾ, ಅಂಡಾಶಯದಲ್ಲಿ ಗಡ್ಡೆಗಳು, ಎಂಡೋಮೆಟ್ರಿಯೋಸಿಸ್, ಸಂತಾನ ನಿಯಂತ್ರಣ ಬಯಸುವವರು, ಗರ್ಭವಸ್ಥೆಯಲ್ಲಿ ಕಾಣುವ ಅಧಿಕ ರಕ್ತದೊತ್ತಡ, ಬಹು ಗರ್ಭಧಾರಣೆ, ಗರ್ಭಧಾರಣೆಗೆ ತೊಡಕಾಗುವ ಆರೋಗ್ಯ ಸಮಸ್ಯೆ ಹಾಗೂ ಶಸ್ತ್ರ ಚಿಕಿತ್ಸೆಯಿಂದುಂಟಾದ ಸಮಸ್ಯೆಗಳು ಮತ್ತು ಇತರ ಸ್ತ್ರೀರೋಗ ಸಮಸ್ಯೆಯಿಂದ ಬಳಲುತ್ತಿರುವ ಗರ್ಭಿಣಿಯರು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಸ್ತ್ರೀ ರೋಗ ತಜ್ಞೆ ಡಾ. ಅಂಬಿಕ ಹೆಗ್ಡೆ ಅವರು ಸಂದರ್ಶನಕ್ಕೆ ಲಭ್ಯ ಇರುತ್ತಾರೆ. ಹೆಸರು ನೋಂದಾವಣೆಗೆ 0824-6613252 ಅಥವಾ 8494890600 ಸಂಖ್ಯೆಯನ್ನು ಸಂಪರ್ಕಿಸಬಹುದು. ಅಥವಾ ajhospitalmarketing@gmail.com / marketing@ajhospital.in ಇ-ಮೇಲ್‌ನ್ನು ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.

ಕಿಬ್ಬೊಟ್ಟೆಯ ಅಲ್ಟ್ರಾಸೌಂಡ್ ಶೇ. 50 ರಿಯಾಯಿತಿ ದರದಲ್ಲಿ ಹಾಗೂ ರಕ್ತ ತಪಾಸಣೆ ಶೇ. 20 ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News