×
Ad

ನ್ಯೂಯಾರ್ಕ್: ಪಂಜಾಬ್ ಮೂಲದ ವ್ಯಕ್ತಿ ಸಂಬಂಧಿಯಿಂದಲೇ ಕೊಲೆ

Update: 2017-06-29 19:52 IST

ನ್ಯೂಯಾರ್ಕ್, ಜೂ. 29: 26 ವರ್ಷದ ಪಂಜಾಬ್ ಮೂಲದ ವ್ಯಕ್ತಿಯೊಬ್ಬನನ್ನು ಆತನ ಸೋದರ ಸಂಬಂಧಿಯೊಬ್ಬ ಇರಿದು ಕೊಲೆ ಮಾಡಿದ ಘಟನೆ ನ್ಯೂಯಾರ್ಕ್‌ನಲ್ಲಿ ನಡೆದಿದೆ.

ನ್ಯೂಯಾರ್ಕ್ ನಗರದ ಕ್ವೀನ್ಸ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಜೂನ್ 26ರ ಮುಂಜಾನೆ 24 ವರ್ಷದ ಲವ್‌ದೀಪ್ ಸಿಂಗ್, ಶರಣ್‌ಜಿತ್ ಸಿಂಗ್‌ಗೆ ಇರಿದನು ಎಂದು ಪೊಲೀಸರು ಹೇಳಿದ್ದಾರೆ.

ಲವ್‌ದೀಪ್‌ನನ್ನು ಬಂಧಿಸಲಾಗಿದ್ದು, ಆತನ ಅಪರಾಧ ಸಾಬೀತಾದರೆ 25 ವರ್ಷದಿಂದ ಜೀವಾವಧಿವರೆಗೆ ಜೈಲು ಶಿಕ್ಷೆಗೆ ಒಳಗಾಗಬಹುದಾಗಿದೆ.

ತನ್ನ ಸೋದರ ಸಂಬಂಧಿ ಮತ್ತು ಸಹವಾಸಿ ಶರಣ್‌ಜಿತ್‌ನನ್ನು ಇರಿದು ಕೊಂದಿರುವುದನ್ನು ಲವ್‌ದೀಪ್ ಒಪ್ಪಿಕೊಂಡಿದ್ದಾನೆ.

ಚಾಲಕನಾಗಿ ಕೆಲಸ ಮಾಡುತ್ತಿದ್ದ ಶರಣ್‌ಜಿತ್ 2013ರಲ್ಲಿ ಭಾರತದಿಂದ ಅಮೆರಿಕಕ್ಕೆ ಹೋಗಿದ್ದರು. ಅವರ ಹೆತ್ತವರು ಭಾರತದಲ್ಲಿದ್ದಾರೆ.

ಕೊಲೆಗೆ ಕಾರಣ ತಿಳಿದುಬಂದಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News