×
Ad

ಬಿ.ಸಚ್ಚಿದಾನಂದ ಹೆಗ್ಡೆ ‘ಬಾಲುಮಾಡೆತಿ’ಗೆ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ

Update: 2017-06-29 20:40 IST

ಉಡುಪಿ, ಜೂ.29: ತುಳುಕೂಟ ಉಡುಪಿ ಸಂಸ್ಥೆಯ ವತಿಯಿಂದ ನೀಡಲಾಗುವ 2016-17ನೇ ಸಾಲಿನ ಎಸ್.ಯು.ಪಣಿಯಾಡಿ ಸ್ಮಾರಕ ‘ಪಣಿಯಾಡಿ ತುಳು ಕಾದಂಬರಿ’ ಪ್ರಶಸ್ತಿಗೆ ಕನ್ನಡ, ತುಳು ಸಾಹಿತಿ ಬಿ. ಸಚ್ಚಿದಾನಂದ ಹೆಗ್ಡೆ ಅವರ ‘ಬಾಲುಮಾಡೆತಿ’ ಕಾದಂಬರಿ ಆಯ್ಕೆಯಾಗಿದೆ.

ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಭಾಜನರಾಗಿರುವ ಬಿ.ಸಚ್ಚಿದಾನಂದ ಹೆಗ್ಡೆ, ಜೀವವಿಮಾ ನಿಗಮದ ವಿಭಾಗೀಯ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದಾರೆ. ಉತ್ತಮ ಚೆಸ್ ಆಟಗಾರ ಹಾಗೂ ತರಬೇತುದಾರರಾಗಿಯೂ ಗಮನ ಸೆಳೆದಿದ್ದಾರೆ.

ಇತಿಹಾಸ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಚ್ಚಿದಾನಂದ ಹೆಗ್ಡೆ ‘ತುಳುನಾಡವರು’ ಎಂಬ ಜನಾಂಗೀಯ ಅಧ್ಯಯನ ಕೃತಿಯನ್ನು ರಚಿಸಿದ್ದಾರೆ. ಇವರ ಬಾಲುಮಾಡೆತಿ ಕಾದಂಬರಿಯಲ್ಲಿ ಸ್ವಜನ ವೈಭವೀಕರಣದ ಚಪಲತೆಯನ್ನು ಮೆಟ್ಟಿನಿಂತ ಜನಾಂಗೀಯ ಮೂಲದ ಮಾಡೆತಿಯನ್ನು ವಸ್ತುನಿಷ್ಠವಾಗಿ ಪೋಣಿಸಿ, ವಿಷ್ಲೇಶಿಸಿರುವ ರೀತಿ ಜನ ಮೆಚ್ಚುಗೆಗೆ ಪಾತ್ರವಾಗಿವೆ.

ಇತಿಹಾಸ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಚ್ಚಿದಾನಂದ ಹೆಗ್ಡೆ ‘ತುಳುನಾಡವರು’ ಎಂಬ ಜನಾಂಗೀಯ ಅಧ್ಯಯನ ಕೃತಿಯನ್ನು ರಚಿಸಿದ್ದಾರೆ. ಇವರ ಬಾಲುಮಾಡೆತಿ ಕಾದಂಬರಿಯಲ್ಲಿ ಸ್ವಜನ ವೈಭವೀಕರಣದ ಚಪಲತೆಯನ್ನು ಮೆಟ್ಟಿನಿಂತ ಜನಾಂಗೀಯ ಮೂಲದ ಮಾಡೆತಿಯನ್ನು ವಸ್ತುನಿಷ್ಠವಾಗಿ ಪೋಣಿಸಿ, ವಿಷ್ಲೇಶಿಸಿರುವ ರೀತಿ ಜನ ಮೆಚ್ಚುಗೆಗೆ ಪಾತ್ರವಾಗಿವೆ. ತುಳುಭಾಷೆಯಲ್ಲಿ ಉತ್ತಮ ಕಾದಂಬರಿಗಳು ಪ್ರಕಟಗೊಳ್ಳಬೇಕೆಂಬ ಆಶಯದೊಂದಿಗೆ ತುಳು ಚಳವಳಿಗೆ ಚಾಲನೆ ನೀಡಿದ ಹಾಗೂ ತುಳುವಿನ ಮೊತ್ತ ಮೊದಲ ಕಾದಂಬರಿಕಾರ ದಿ.ಎಸ್.ಯು.ಪಣಿಯಾಡಿ ಅವರ ಹೆಸರಿನಲ್ಲಿ ಕಳೆದ 22 ವರ್ಷಗಳಿಂದ ಪಣಿಯಾಡಿ ಕಾದಂಬರಿ ಸ್ಪರ್ಧೆಯನ್ನು ತುಳುಕೂಟ ಉಡುಪಿ ನಡೆಸಿಕೊಂಡು ಬರುತ್ತಿದೆ.

ಪ್ರಶಸ್ತಿ 8 ಸಾವಿರ ರೂ. ನಗದು, ಪ್ರಶಸ್ತಿ ಫಲಕವನ್ನು ಹೊಂದಿದೆ. ಆಗಸ್ಟ್ ತಿಂಗಳ 2ನೇ ವಾರದಲ್ಲಿ ಉಡುಪಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಕಾದಂಬರಿ ಸ್ಪರ್ಧೆಯ ತೀರ್ಪುಗಾರರಾಗಿ ಸಾಹಿತಿಗಳಾದ ಪುತ್ತಿಗೆ ಪದ್ಮನಾಭ ರೈ, ಗಂಗಾಧರ್ ಕಿದಿಯೂರು, ಡಾ.ಸುರೇಶ್ ರೈ ಸಹಕರಿಸಿದ್ದರು ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಂಚಾಲಕ ಪ್ರಕಾಶ ಸುವರ್ಣ ಕಟಪಾಡಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News