ವಿದ್ಯುತ್ ತಂತಿ ತುಳಿದು ಕೂಲಿ ಕಾರ್ಮಿಕ ಮೃತ್ಯು
Update: 2017-06-29 20:48 IST
ಬಂಟ್ವಾಳ, ಜೂ. 29: ವಿದ್ಯುತ್ ತಂತಿ ತುಳಿದು ಕೂಲಿ ಕಾರ್ಮಿಕನೋರ್ವ ಮೃತಪಟ್ಟ ದಾರುಣ ಘಟನೆ ತಾಲೂಕಿನ ಕುರಿಯಾಲ ಗ್ರಾಮದ ಮಾಯಿಲಕೋಡಿ ಎಂಬಲ್ಲಿ ಗುರುವಾರ ನಡೆದಿದೆ.
ಇಲ್ಲಿನ ನಿವಾಸಿ ಯೋಗೇಶ್ ಪೂಜಾರಿ (38) ಮೃತರು ಎಂದು ಗುರುತಿಸಲಾಗಿದೆ.
ಇವರು ಇಲ್ಲಿನ ಮನೆಯೊಂದರಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಸಂಜೆಯ ವೇಳೆ ದನವನ್ನು ತರಳೆಂದು ತೋಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ತುಕ್ಕು ಹಿಡಿದು ಮುರಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಯೋಗೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿವಾಹಿತನಾಗಿರುವ ಯೋಗೇಶ್ ರಿಗೆ ನಾಲ್ವರು ಮಕ್ಕಳಿದ್ದು, ತೀರಾ ಬಡ ಕುಟುಂಬವಾಗಿದೆ. ಸಣ್ಣ ಮನೆಯೊಂದರಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಯೋಗೇಶ್ ಆಧಾರ ಸ್ಥಂಭವಾಗಿದ್ದು ಅವರ ಅಕಾಲಿಕ ಮರಣದಿಂದ ಕುಟುಂಬ ಕಂಗಾಲಾಗಿದೆ.