×
Ad

ಉಡುಪಿ: ಆಧಾರ್ ನೋಂದಣಿ ಕಾರ್ಯಕ್ರಮ

Update: 2017-06-29 20:58 IST

ಉಡುಪಿ, ಜೂ.29: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಉಡುಪಿ ಹಾಗೂ ಉಡುಪಿ ತಾಲೂಕು ಕಚೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡ ಎರಡು ದಿನಗಳ ಆಧಾರ್ ನೋಂದಣಿ ಕಾರ್ಯಕ್ರಮವನ್ನು ಜಿಲ್ಲಾ ನ್ಯಾಯಾಧೀಶ ವೆಂಕಟೇಶ ಟಿ. ನಾಯ್ಕ ಇಂದು ಉದ್ಘಾಟಿಸಿದರು.

ಪ್ರಸ್ತುತ ದೇಶದಲ್ಲಿ ಬಹು ಮುಖ್ಯವಾದ ವಿಳಾಸ ದೃಢೀಕರಣ ಪತ್ರವಾಗಿ ಗುರುತಿಸಲ್ಪಟ್ಟಿರುವ ಆಧಾರ್ ಕಾರ್ಡನ್ನು ಪ್ರತಿಯೊಬ್ಬರೂ ಹೊಂದುವುದು ಇಂದಿನ ಅಗತ್ಯ. ಎಲ್ಲಾ ದೇಶವಾಸಿಗಳು ಆಧಾರ್ ಕಾರ್ಡನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಅವರು ತಿಳಿಸಿದರು.
ಉದ್ಯೋಗ, ಶಿಕ್ಷಣ, ಪಿಂಚಣ ಯೋಜನೆಗಳು, ವಿಮೆ, ಹೊಸ ಗ್ಯಾಸ್ ಕನೆಕ್ಷನ್ ಪಾಸ್‌ಪೋರ್ಟ್, ಬ್ಯಾಂಕ್ ಖಾತೆ, ಆದಾಯ ತೆರಿಗೆ ಪಾವತಿ ಸೇರಿದಂತೆ ಆಧಾರ್ ಕಾರ್ಡ್‌ನಿಂದ ಹತ್ತು ಹಲವು ಉಪಯೋಗಳಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News