ನೀರಿಗೆ ಬಿದ್ದು ವೃದ್ಧ ಮೃತ್ಯು
Update: 2017-06-29 22:24 IST
ಮಂಗಳೂರು, ಜೂ. 29: ನಗರದ ಹೊರವಲಯದಲ್ಲಿ ಆಡಂಕುದ್ರು ನಿವಾಸಿ ಎಡ್ಮಂಡ್ ಡಿಸೋಜ (76) ಎಂಬವರು ಗುರುವಾರ ಬೆಳಗ್ಗೆ ಮನೆಯ ಸಮೀಪದ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಶೌಚ ಮಾಡಲೆಂದು ಮನೆಯಿಂದ ಕೆರೆಯ ಬಳಿ ತೆರಳಿದ್ದ ಅವರು ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದ್ದು, ಎಡ್ಮಂಡ್ ಮನೆಗೆ ಮರಳದಿರುವುದರಿಂದ ಮನೆ ಮಂದಿ ಹುಡುಕಾಡಿದಾಗ ಅವರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ ಎಂದು ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ದಾಖಲಾಗಿದೆ.