×
Ad

ನರ್ಮ್ ಬಸ್ ನಿಲ್ದಾಣಕ್ಕೆ ಬಳಕೆದಾರರ ವೇದಿಕೆ ಆಗ್ರಹ

Update: 2017-06-29 22:25 IST

ಉಡುಪಿ, ಜೂ.29: ಉಡುಪಿಗೆ ಸರಕಾರಿ ನರ್ಮ್ ಬಸ್ಸುಗಳು ಬಂದಿದ್ದು, ಈ ಬಸ್ಸು ಎಲ್ಲರಿಗೂ ಅನುಕೂಲವಾಗಿದೆ. ಮಹಿಳೆಯರಿಗೆ, ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಬಸ್ಸು ಹತ್ತಿ ಇಳಿಯುವುದು ಸುಲಭವಾಗಿದೆ.

ಆದರೆ ಈ ಬಸ್‌ಗಳಿಗೆ ಸರಿಯಾದ ನಿಲ್ದಾಣವೊಂದನ್ನು ನಿರ್ಮಿಸಿ ಇದರ ಸಂಪೂರ್ಣ ಪ್ರಯೋಜನವನ್ನು ಉಡುಪಿ ನಾಗರಿಕರು ಪಡೆಯುವಂತೆ ಮಾಡಬೇಕೆಂದು ಉಡುಪಿ ಬಳಕೆದಾರರ ವೇದಿಕೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಗ್ರಹಿಸಿದೆ.

ಈ ಬಸ್ಸುಗಳು ಈ ಗ್ರಾಮಾಂತರದ ಕಡೆಗೂ ಹೋಗುತ್ತಿವೆ. ಈ ಬಸ್ಸಿನಿಂದ ಗ್ರಾಮೀಣ ನಾಗರಿಕರಿಗೂ ಪ್ರಯಾಣ ಬೆಳೆಸಲು ಸಾಧ್ಯವಾಗಿದೆ. ಎಲ್ಲದಕ್ಕೂ ಇದು ಅನುಕೂಲವಾಗಿದೆ. ಇರುವ ಒಂದೇ ಒಂದು ಅನಾನುಕೂಲವೆಂದರೆ ಈ ಬಸ್ಸಿಗೆ ನಿಲ್ದಾಣವಿಲ್ಲ. ಗಾಳಿ ಮಳೆ ಸುರಿಯುವಾಗ ಪ್ರಯಾಣಿಕರು ಕೊಡೆ ಹಿಡಿದು ಕೊಂಡು ನಿಲ್ಲಬೇಕಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಬಳಕೆದಾರರ ವೇದಿಕೆ ಸಂಚಾಲಕ ಕೆ.ದಾಮೋದರ ಐತಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News