ಜೂನ್ 29ರಿಂದ ಸಿಎಂ ಮಡವೂರ್ ಮಖಾಂ ಉರೂಸ್
ಬಂಟ್ವಾಳ, ಜೂ. 29: ದಕ್ಷಿಣ ಭಾರತದ ಪ್ರಸಿದ್ಧ ಝಿಯಾರತ್ ಕೇಂದ್ರವಾದ ಸಿಎಂ ಮಡವೂರ್ ಮಖಾಂ ಶರೀಫ್‌ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾಹಿ ಸಿಎಂ ಮಹಮ್ಮದ್ ಅಬೂಬಕರ್ (ಖ.ಸಿ.) ರವರ 27ನೆ ಉರೂಸ್ ಕಾರ್ಯಕ್ರಮ ಜೂ. 29ರಿಂದ ಜುಲೈ 3ರ ತನಕ ನಡೆಯಲಿದೆ ಎಂದು ಅನಿಲಕಟ್ಟೆ ಮಡವೂರ್ ಸಿಎಂ ಯತೀಂಖಾನ ಎಜುಕೇಷನಲ್ ಮತ್ತು ಕಲ್ಚರಲ್ ಕಾಂಪ್ಲೆಕ್ಸ್ ಕನ್ವೀನರ್ ಸಿ.ಎಚ್. ಇಬ್ರಾಹೀಂ ಮುಸ್ಲಿಯಾರ್ ಹೇಳಿದರು.
ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉರೂಸ್ ಪ್ರಯುಕ್ತ ಧ್ವಜಾರೋಹಣ, ಮತಪ್ರವಚನ, ಸಿಎಂ ಮಡವೂರು ಅನುಸ್ಮರಣೆ, ಮಜ್ಲಿಸುನ್ನೂರು, ಸ್ವಲಾತ್ ಮಜ್ಲಿಸ್, ಅನ್ನದಾನ ಮೊದಲಾದ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರತಿನಿಧಿಗಳಾಗಿ ಸೈಯದ್ ಎನ್.ಪಿ.ಎಂ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ, ಸಮಸ್ತ ಉಪಾಧ್ಯಕ್ಷ ಕೆ.ಪಿ.ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲ್, ಸೈಯದ್ ಹುಸೈನ್ ಬಾಅಲವಿ ತಂಙಳ್, ಕುಕ್ಕಾಜೆ ತಂಙಳ್, ಕಿನ್ಯ ತಂಙಳ್, ಹಬೀಬ್ ತಂಙಳ್, ಪಾತೂರು ಉಸ್ತಾದ್, ಕಿನ್ಯ ದಾರಿಮಿ, ಉದ್ಯಾವರ ತಂಙಳ್ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಸೈಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಜೊತೆ ಕನ್ವೀನರ್‌ಗಳಾದ ಅಬೂಬಕರ್ ಅನಿಲಕಟ್ಟೆ, ಅಬೂಬಕರ್ ಮಗಿಲಪದವು. ಕೆ.ಎ.ಹಸೈನಾರ್ ಮುಸ್ಲಿಯಾರ್, ರಝಾಕ್ ಹಾಜಿ, ಮುಹಮ್ಮದ್ ಮುಸ್ಲಿಯಾರ್ ನೂಜಿ ಉಪಸ್ಥಿತರಿದ್ದರು.