ಪರಿಶ್ರಮದ ಹಾದಿಯಲ್ಲಿ ನಾಯಕತ್ವದ ಮೆಟ್ಟಿಲು: ಡಾ. ಸುಲತ ವಿದ್ಯಾಧರ್
ಮೂಡುಬಿದಿರೆ, ಜೂ.30: ವಿದ್ಯಾರ್ಥಿ ಸಂಘಟನೆಯು ಮುಂದಿನ ಸಾಮಾಜಿಕ ಜೀವನದಲ್ಲಿ ಉನ್ನತ ಗುರಿಯನ್ನು ತಲುಪಲು ಒಂದು ವೇದಿಕೆ ಇದ್ದಂತೆ, ಈ ವೇದಿಕೆಯಿಂದ ಮಕ್ಕಳು ತಮ್ಮ ಗುರಿಯನ್ನು ತಲುಪಬಹುದು. ಅಲ್ಲದೇ ಈ ಸಂಘಗಳ ಮೂಲಕ ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದ ಒಂದು ಜವಬ್ದಾರಿಯನ್ನು ಪರಿಪಾಲನೆ ಮಾಡುವುದಕ್ಕೆ ಅನುಕೂಲವಾಗುತ್ತದೆ ಎಂದು ಡಾ. ಸುಲತ ವಿದ್ಯಾಧರ್, ದಿಗಂಬರ ಜೈನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟಿಸಿ ಮಾತನಾಡಿದರು.
ಆಡಳಿತ ಅಧಿಕಾರಿಯಾದ ಕು ಅಭಿಲಾಷ ಶೆಟ್ಟಿ ಮಕ್ಕಳ ಚುನಾವಣಾ ವರದಿಯನ್ನು ವಾಚಿಸಿದರು. ದಿಗಂಬರ ಜೈನವಿದ್ಯಾವರ್ಧಕ ಸಂಘ ಸಂಚಾಲಕರಾದ ಶ್ರೀ ಬಿ.ಪ್ರತಾಪ್ ಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಲಭಿಸಿದಂತಹ ಅವಕಾಶವನ್ನು ದುರುಪಯೋಗ ಮಾಡದೆ, ತಮ್ಮ ಜೀವನದ ಉದ್ದೇಶವನ್ನು ಉತ್ತಮ ರೀತಿಯಿಂದ ಸಾಧಿಸಲಿ ಎಂದು ವಿದ್ಯಾರ್ಥಿಗಳಿಗೆ ಶುಭಕಾಮನೆ ಕೋರಿದರು.
ಎಪ್ರಿಲ್ 2017ನೇ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಸದಸ್ಯರಾದ ಶ್ರೀ ಹೇಮರಾಜ್, ಮುಖ್ಯೋಪಾಧ್ಯಾಯಿನಿಯರಾದ ಸುಪ್ರಿಯ ಮತ್ತು ಪ್ರತಿಭಾ, ಮತ್ತಿತರರು ಉಪಸ್ಥಿತರಿದ್ದರು.