ಮಸೀದಿಯಲ್ಲಿ ದೇಣಿಗೆ ಸಂಗ್ರಹಿಸಿ ಬಡರೋಗಿಯ ಚಿಕಿತ್ಸೆಗೆ ನೆರವಾದ ಮುಸ್ಲಿಮರು
Update: 2017-06-30 18:42 IST
ಉಡುಪಿ,ಜೂ.30 : ಕಳೆದ ಹಲವಾರು ದಿನಗಳಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಮೆದುಳು ಸಂಬಂಧಿತ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಸತೀಶ್ ಎಂಬವರಿಗೆ ಮುಸ್ಲಿಮರು ಸಹಾಯ ಹಸ್ತ ಚಾಚಿದ್ದಾರೆ. ಈಗಾಗಲೇ ಚಿಕಿತ್ಸೆಗೆ ಒಂದು ಲಕ್ಷ ರೂ.ಗಳ ಅವಶ್ಯಕತೆಯಿದ್ದು, ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾದ ಮುಸ್ಲಿಮ್ ಬಾಂಧವರು ಶುಕ್ರವಾರದ ನಮಾಝಿನ ನಂತರ ದೇಣಿಗೆ ಸಂಗ್ರಹಿಸಿ, ರೋಗಿಯ ಕುಟುಂಬದವರಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.