×
Ad

ಇರಾನ್‌ನ ಅಹ್ವಾಝ್‌ನಲ್ಲಿ 54 ಡಿಗ್ರಿ ಸೆ. ಉಷ್ಣತೆ

Update: 2017-06-30 19:52 IST

ಇರಾನ್‌, ಜೂ. 30: ಇರಾನ್‌ನ ನಗರ ಅಹ್ವಾಝ್‌ನಲ್ಲಿ ಗುರುವಾರ 54 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದ್ದು ಇದು ಭೂಮಿಯ ಮೇಲೆ ದಾಖಲಾದ ಗರಿಷ್ಠ ಉಷ್ಣತೆಯನ್ನು ಸರಿಗಟ್ಟಿದೆ ಎಂದು ‘ವಾಶಿಂಗ್ಟನ್ ಪೋಸ್ಟ್’ನ ವರದಿಯೊಂದು ಹೇಳಿದೆ.

ಅಮೆರಿಕದ ಹವಾಮಾನ ಮುನ್ನೆಚ್ಚರಿಕೆ ಸಂಸ್ಥೆ ‘ವೆದರ್ ಅಂಡರ್‌ಗ್ರೌಂಡ್’ನ ಅಂಕಿಅಂಶಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಇದು ಆಧುನಿಕ ಕಾಲದಲ್ಲಿ ದಾಖಲಾದ ವಿಶ್ವಾಸಾರ್ಹ ಉಷ್ಣತೆಗಳೊಂದಿಗೆ ಸರಿಗಟ್ಟಿದೆ ಎಂದು ಅದು ಹೇಳಿದೆ.

ಅಮೆರಿಕದ ಕ್ಯಾಲಿಫೋರ್ನಿಯ ನಗರದ ಡೆತ್ ವ್ಯಾಲಿಯಲ್ಲಿ 2013 ಜೂನ್ 30ರಂದು ಮತ್ತು ಕುವೈತ್‌ನ ಮಿಟ್ರಿಬಾಹ್‌ನಲ್ಲಿ 2016 ಜುಲೈ 21ರಂದು ಇಷ್ಟೇ ಪ್ರಮಾಣದ ಉಷ್ಣತೆ ದಾಖಲಾಗಿತ್ತು.

ವೆದರ್ ಅಂಡರ್‌ಗ್ರೌಂಡ್‌ನ ಅಂಕಿಅಂಶಗಳನ್ನು ‘ವರ್ಲ್ಡ್ ಮೀಟಿಯರಾಲಜಿಕಲ್ ಆರ್ಗನೈಸೇಶನ್ ಪರಿಶೀಲಿಸಿ ಖಚಿತ ಪಡಿಸಿದ ಬಳಿಕ ಅದು ದಾಖಲೆಯಾಗುತ್ತದೆ.

ಅಧಿಕೃತವಾಗಿ ಡೆತ್ ವ್ಯಾಲಿಯಲ್ಲಿ 1913 ಜುಲೈ 10ರಂದು 57 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಜಾಗತಿಕ ದಾಖಲೆಯಾಗಿದೆ ಎಂದು ಪತ್ರಿಕೆ ಹೇಳಿದೆ.

ಆದರೆ, ಅದನ್ನು ‘ವೆದರ್ ಅಂಡರ್‌ಗ್ರೌಂಡ್’ನ ಹವಾಮಾನ ಇತಿಹಾಸ ಪರಿಣತ ಕ್ರಿಸ್ಟೋಫರ್ ಬರ್ಟ್ ತಳ್ಳಿಹಾಕಿದ್ದಾರೆ. ಹವಾಮಾನ ದೃಷ್ಟಿಕೋನದಿಂದ ನೋಡಿದರೆ ಇದು ಸಾಧ್ಯವಿಲ್ಲ ಎಂದು ಹೇಳಿರುವ ಅವರು, ಹವಾಮಾನ ವೀಕ್ಷಕರು ತಪ್ಪುಗಳನ್ನು ಮಾಡಿದ್ದಾರೆ ಎಂದು ಹೇಳುತ್ತಾರೆ.

ಭಾರತದ ಗರಿಷ್ಠ ಉಷ್ಣತೆ 51 ಡಿಗ್ರಿ

ಭಾರತದ ಗರಿಷ್ಠ ಉಷ್ಣತೆ 51 ಡಿಗ್ರಿ ಸೆಲ್ಸಿಯಸ್ 2016 ಮೇ 19ರಂದು ರಾಜಸ್ಥಾನದ ಫಲೋಡಿಯಲ್ಲಿ ದಾಖಲಾಗಿತ್ತು.

ಇಸ್ರೇಲ್‌ನ ತಿರಟ್ ಟಝ್ವಿಯಲ್ಲಿ 1942 ಜೂನ್ 21ರಂದು 54 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿತ್ತು ಎಂದು ಇಸ್ರೇಲ್ ಮೀಟಿಯರಾಲಜಿಕಲ್ ಸರ್ವಿಸ್ ಕೂಡ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News