ಹಾರಾಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾಗಿ ಪ್ರತಿಮಾ ಯು.ರೈ
Update: 2017-06-30 20:31 IST
ಪುತ್ತೂರು,ಜೂ.30: ಹಾರಾಡಿ ಸರ್ಕಾರಿ ಮಾಹಿತಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತೆ ಪ್ರತಿಮಾ ಯು. ರೈ ಮತ್ತು ಉಪಾಧ್ಯಕ್ಷರಾಗಿ ಅಬೂಬಕ್ಕರ್ ಬಲ್ನಾಡು ಅವರು ಆಯ್ಕೆಯಾಗಿದ್ದಾರೆ.
ಶುಕ್ರವಾರ ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಸದಸ್ಯರಾಗಿ ಮಹೇಶ್ ನಾಯ್ಕ ಬನ್ನೂರು, ರಮೇಶ ಬಿ. ನೆಕ್ಕಿಲು, ಅಬ್ದುಲ್ ಗಫೂರ್ ಪಡೀಲು, ಜಯಕುಮಾರ್ ಕೊಂಬೆಟ್ಟು, ಖತೀಜ ಬನ್ನೂರು, ಸೌಮ್ಯ ಪಡೀಲು, ಕೆ. ಪಲ್ಲವಿ ಭಕ್ತ ಕೊಂಬೆಟ್ಟು, ಆನಂದ ಎಂ.ಎಂ ಪಡೀಲು ಮತ್ತು ಕೃಷ್ಣ ನಾಯ್ಕ ಬನ್ನೂರು ಆಯ್ಕೆಯಾದರು. ಶಾಲಾ ಮುಖ್ಯಶಿಕ್ಷಕ ಮುದರ ಎಸ್ ಸಮಿತಿ ರಚನಾ ಪ್ರಕ್ರಿಯೆ ನಡೆಸಿಕೊಟ್ಟರು. ನಗರಸಭಾ ಸದಸ್ಯೆ ಜಯಲಕ್ಷ್ಮೀ ಸುರೇಶ್ ಉಪಸ್ಥಿತರಿದ್ದರು. ಶಿಕ್ಷಕ ಪ್ರಶಾಂತ್ ಅನಂತಾಡಿ ಶೈಕ್ಷಣಿಕ ಮಾಹಿತಿ ನೀಡಿದರು. ಶಿಕ್ಷಕಿ ವಿಜಯಾ ಸ್ವಾಗತಿಸಿ ನಿರೂಪಿಸಿದರು. ಪ್ರಿಯಾಕುಮಾರಿ ವಂದಿಸಿದರು.