1962ರ ಭಾರತಕ್ಕೂ ಈಗಿನ ಭಾರತಕ್ಕೂ ವ್ಯತ್ಯಾಸವಿದೆ

Update: 2017-06-30 15:09 GMT

ಹೊಸದಿಲ್ಲಿ, ಜೂ.30: ಈಗಿನ ಭಾರತವು 1962ರ ಭಾರತಕ್ಕಿಂತ ವಿಭಿನ್ನವಾಗಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 1962ರ ಸೋಲಿನಿಂದ ಪಾಠ ಕಲಿಯಿರಿ ಎಂಬ ಚೀನಾದ ಬೆದರಿಕೆಗೆ ಜೇಟ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ.

 ಅವರು ನಮ್ಮನ್ನು ನೆನಪಿಸಲು ಪ್ರಯತ್ನಿಸುತ್ತಿದ್ದರೆ, 1962ರ ಭಾರತ ಮತ್ತು 2017ರ ಭಾರತ ವಿಭಿನ್ನವಾಗಿದೆ ಎಂದವರಿಗೆ ಹೇಳಬಯಸುತ್ತೇವೆ ಎಂದು ಜೇಟ್ಲಿ ಹೇಳಿದರು. ಚೀನಾವು ತನ್ನ (ಭೂತಾನ್) ನೆಲದ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ಭೂತಾನ್ ಸರಕಾರ ಸ್ಪಷ್ಟಪಡಿಸಿದೆ. ಇದು ಖಂಡಿತವಾಗಿಯೂ ತಪ್ಪು ಎಂದು ಜೇಟ್ಲಿ ತಿಳಿಸಿದರು.

 ಭೂತಾನ್ ಸರಕಾರದ ಹೇಳಿಕೆಯ ಬಳಿಕ ಈಗ ಪರಿಸ್ಥಿತಿ ಸ್ಪಷ್ಟವಾಗಿದೆ. ಇದು ಭೂತಾನ್‌ಗೆ ಸೇರಿದ ಭೂಮಿಯಾಗಿದ್ದು ಭಾರತ ಗಡಿಪ್ರದೇಶದ ಸಮೀಪದಲ್ಲಿದೆ. ಇಲ್ಲಿ ಭೂತಾನ್ ಮತ್ತು ಭಾರತ ಭದ್ರತಾ ವ್ಯವಸ್ಥೆ ಕೈಗೊಳ್ಳುತ್ತದೆ ಎಂದ ಜೇಟ್ಲಿ, ಇಷ್ಟ ಬಂದಾಗ ನಾವು ಅಲ್ಲಿ ಬಂದು ಬೇರೊಬ್ಬರ ಭೂಮಿಯನ್ನು ಕೈವಶ ಮಾಡಿಕೊಳ್ಳುತ್ತೇವೆ ಎಂಬ ಚೀನಾದ ಧೋರಣೆ ಸರಿಯಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News