ಯುವಕನಿಗೆ ಹಲ್ಲೆ ಆರೋಪ: ಮೂವರ ಸೆರೆ
Update: 2017-06-30 21:11 IST
ಮಂಗಳೂರು, ಜೂ.30: ನಗರದ ಸಿಟಿ ಸೆಂಟರ್‌ನಲ್ಲಿ ಸೋಮವಾರ ಯುವತಿಯೋರ್ವಳನ್ನು ಚುಡಾಯಿಸಿದ ಆರೋಪದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ಬಂದರ್ ಪೊಲೀಸರು ಬಂಧಿಸಿ ವಾಹನವೊಂದನ್ನು ವಶಪಡಿಸಿಕೊಂಡಿದ್ದಾರೆ.
ಬಟ್ಟೆ ವ್ಯಾಪಾರಿ ಜೆಪ್ಪುವಿನ ಇರ್ಫಾನ್ ಎಂ.ಎಚ್.(29), ಕೋಳಿ ಅಂಗಡಿಯಲ್ಲಿ ಕೆಲಸ ಮಾಡುವ ಅಡ್ಯಾರ್ ಕಣ್ಣೂರಿನ ಎಂ. ಮುಹಮ್ಮದ್ ಬಶೀರ್ (22), ಬಂಟ್ವಾಳ ಗೋಳ್ತಮಜಲು ನಿವಾಸಿಯಾಗಿರುವ ವಿದ್ಯಾರ್ಥಿ ಅಬೂಬಕ್ಕರ್ ಸಿದ್ದಿಕ್ (19) ಬಂಧಿತ ಆರೋಪಿಗಳು.
ಇವರನ್ನು ನಗರದ ಕಂಕನಾಡಿ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ಪೈಕಿ ಅಬೂಬಕ್ಕರ್ ಸಿದ್ದಿಕ್‌ನಿಂದ ದ್ವಿಚಕ್ರ ವಾಹನವೊಂದನ್ನು ವಶಪಡಿಸಿಕೊಳ್ಳಲಾಗಿದೆ. ಸುರತ್ಕಲ್ ಚೊಕ್ಕಬೆಟ್ಟುವಿನ ಇಂಜಿನಿಯರಿಂಗ್ ವಿದ್ಯಾರ್ಥಿ ಮನೋಜ್ (19) ಎಂಬಾತ ಯುವತಿಯ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಈ ತಂಡ ಹಲ್ಲೆ ನಡೆಸಿ ಪರಾರಿಯಾಗಿತ್ತು.
ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.