×
Ad

ಬಂಟ್ವಾಳಕ್ಕೆ ಹೊಸ ಸರ್ಕಲ್ ಇನ್ಸ್‍ಪೆಕ್ಟರ್

Update: 2017-06-30 21:13 IST

ಬಂಟ್ವಾಳ,ಜೂ.30: ಮಂಗಳೂರು ಆಂತರಿಕ ಭದ್ರತಾ ವಿಭಾಗದಲ್ಲಿದ್ದ ಸರ್ಕಲ್ ಇನ್ಸ್‍ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದೇಶ್ ಪಿ.ಜಿ. ಅವರನ್ನು ಬಂಟ್ವಾಳ ವೃತ್ತನಿರೀಕ್ಷಕರನ್ನಾಗಿ ವರ್ಗಾಯಿಸಲಾಗಿದೆ. 2005ರ ಬ್ಯಾಚ್ ಅಧಿಕಾರಿಯಾದ ಅವರು, ಎಸ್.ಐ. ಆಗಿ ಕೊಪ್ಪ, ಕಾರ್ಕಳ ಗ್ರಾಮಾಂತರ, ಉಳ್ಳಾಲ, ಕದ್ರಿ, ಚಿಕ್ಕಮಗಳೂರು, ಬೆಳ್ತಂಗಡಿ ಠಾಣೆಗಳಲ್ಲಿ ಕರ್ತವ್ಯ ಸಲ್ಲಿಸಿದ್ದರು. ಪದೋನ್ನತಿ ಹೊಂದಿ ಮಂಗಳೂರು ಆಂತರಿಕ ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು ಇದೀಗ ಇಡೀ ರಾಜ್ಯದ ಗಮನ ಸೆಳೆದಿರುವ ಬಂಟ್ವಾಳ ವೃತ್ತಕ್ಕೆ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ನಿಯುಕ್ತಿ ಹೊಂದಿದ್ದಾರೆ. ಬಿ.ಕೆ. ಮಂಜಯ್ಯ ಅವರು ಈ ಹಿಂದೆ ವೃತ್ತನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಗಲಭೆ ಬಳಿಕ ಅವರ ವರ್ಗಾವಣೆ ನಡೆದಿತ್ತು. ಅದಾದ ಬಳಿಕ ಸಿ.ಯು.ಬೆಳ್ಳಿಯಪ್ಪ ಅವರು ನಿಯೋಜನೆ ಮೇರೆಗೆ ಬಂಟ್ವಾಳಕ್ಕೆ ಆಗಮಿಸಿದ್ದರು.

ಶನಿವಾರ ಶಾಂತಿಸಭೆ

ಶನಿವಾರ ಬ್ರಹ್ಮರಕೂಟ್ಲುವಿನಲ್ಲಿರುವ ಬಂಟರ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಸಾರ್ವಜನಿಕ ಶಾಂತಿಸಭೆ ನಡೆಯಲಿದೆ. ಐಜಿ ಹರಿಶೇಖರನ್, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್ ಸಹಿತ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News