ಅಕ್ರಮ ಜಾನುವಾರು ಸಾಗಾಟ: ಇಬ್ಬರ ಸೆರೆ
Update: 2017-06-30 21:18 IST
ಕೋಟ, ಜೂ.30: ಗೂಡ್ಸ್ ಟೆಂಪೊದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಕೋಟ ಪೊಲೀಸರು ಮಣೂರು ಹೊಟೇಲ್ ಇಂದ್ರಪ್ರಸ್ಥದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜೂ.29ರಂದು ಸಂಜೆ ವೇಳೆ ಬಂಧಿಸಿದ್ದಾರೆ.
ಬಂಧಿತರನ್ನು ಮೂಳೂರು ಸುನ್ನಿ ಸೆಂಟರ್ ಬಳಿಯ ನಿವಾಸಿ ಮುಹಮ್ಮದ್ ರಿಜ್ವಾನ್(25) ಹಾಗೂ ರಾಮ ಮುಕಾರಿ(52) ಎಂದು ಗುರುತಿಸಲಾಗಿದೆ. ಇವರಿಂದ ವಾಹನದಲ್ಲಿದ್ದ 40ಸಾವಿರ ರೂ. ವೌಲ್ಯದ 2 ಕೋಣಗಳನ್ನು ಮತ್ತು 3.5ಲಕ್ಷ ರೂ. ವೌಲ್ಯದ ಬುಲೇರೋ ಚಾಂಪ್ ಗೂಡ್ಸ್ ಟೆಂಪೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.